ಬೆದ್ರುಪಣೆಯಲ್ಲಿ ಮರಿಯಾನೆಯ ಮೃತದೇಹ ಪತ್ತೆ

ಸುಳ್ಯ: ಅರಂತೋಡಿನ ಬೆದ್ರುಪಣೆ ಎಂಬಲ್ಲಿ ಮರಿಯಾನೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗಂಡಾನೆಗಳ ದಾಳಿಯಿಂದಾಗಿ ಈ ಘಟನೆ ನಡೆದಿರುವ ಸಂದೇಹ ವ್ಯಕ್ತವಾಗಿದೆ.

ಬೆದ್ರುಪಣೆಯ ಅಶೋಕ್ ಎಂಬವರ ತೋಟದಲ್ಲಿ ಮರಿಯಾನೆಯ ‌ಶವ ಪತ್ತೆಯಾಗಿರುವುದಾಗಿದೆ. ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ.





















































ರಾತ್ರಿ ಸಮಯದಲ್ಲಿ ತೋಟಕ್ಕೆ ದಾಳಿಯಿಟ್ಟ ಆನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಓಡಿಸಿದ್ದರು. ಇದಾದ ಬಳಿಕ ಮುಂಜಾನೆ ವೇಳೆ ಮತ್ತೆ ಆನೆಗಳು ತೋಟಕ್ಕೆ ಬಂದಿದ್ದು, ಕಿತ್ತಾಟ ನಡೆಸಿರಬಹುದು, ಈ ವೇಳೆ ಮರಿಯಾನೆ ಮೃತಪಟ್ಟಿರುವ ಸಂದೇಹ ವ್ಯಕ್ತವಾಗಿದೆ.

 
 

ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ತೆರಳಿ ಪರಿಶೀಲನೆ ನಡೆಸಿದೆ.

error: Content is protected !!
Scroll to Top