ಪುತ್ತೂರು: ಕುಣಿಗಲ್ ಸಮೀಪ ಬೈಕ್ ಮತ್ತು ಕೋಳಿ ಸಾಗಾಟ ವಾಹನ ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯವಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರಿನ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತನನ್ನು ಬೆಳ್ಳಾರೆಯ ವಾಸುದೇವ ರೈ – ಶರ್ಮಿಳಾ ವಿ. ರೈ ದಂಪತಿ ಪುತ್ರ ಸೂರಜ್ ರೈ (27) ಎಂದು ಗುರುತಿಸಲಾಗಿದೆ.
ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಸೂರಜ್ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಅವರ ಬೈಕ್ ಮತ್ತು ಕೋಳಿ ಸಾಗಾಟದ ವಾಹನದ ನಡುವೆ ಕುಣಿಗಲ್ ಸಮೀಪ ಅಪಘಾತವಾಗಿತ್ತು. ಈ ದುರ್ಘಟನೆಯಲ್ಲಿ ಸೂರಜ್ ಅವರ ತಲೆಗೆ ತೀವ್ರ ಗಾಯಗಳಾಗಿತ್ತು.
ಮೃತರು ಪತ್ನಿ, ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
























