ಗುರುವಾಯನಕೆರೆ: ಶ್ರೀ ಶಾರದಾ ಭಜನಾ ಮಂಡಳಿ ತಣ್ಣೀರು ಪಂತ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ವಲಯ ಸಹಯೋಗದಲ್ಲಿ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರವು ಭಜನಾ ಮಂಡಳಿಯ ವಠಾರದಲ್ಲಿ ಜರಗಿತು.
ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಶಿಬಿರಾರ್ಥಿಗಳಿಗೆ ಶ್ರೀ ಮಹಾಭಾರತ ಕಥಾ ನಿರೂಪಣೆ ಮಾಡಿದರು. ಮಹಾಭಾರತವೂ ದಾಯಾದಿಗಳ ಕಲಹವಾದರೂ ಧರ್ಮ ಅಧರ್ಮಗಳ ಸಂಘರ್ಷವಾಗಿದೆ. ಶ್ರೀ ಕೃಷ್ಣನು ಪಾಂಡವರ ಮೂಲಕ ಧರ್ಮವನ್ನು ಉದ್ದರಿಸಿ ಸತ್ಯ ಮತ್ತು ನ್ಯಾಯಕ್ಕೆ ಜಯವಾಗುದೆಂಬ ಸಾರ್ವಕಾಲಿಕ ಸಂದೇಶವನ್ನು ಮಹಾಭಾರತವು ನೀಡಿದೆ ಎಂದರು.
55 ಶಿಬಿರಾರ್ಥಿಗಳು ಭಜನಾ ತರಬೇತಿಯೊಂದಿಗೆ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಮಾಹಿತಿಯನ್ನು ಈ ಶಿಬಿರದಲ್ಲಿ ಪಡೆಯುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಭಜನಾ ಮಂಡಳಿ ಅಧ್ಯಕ್ಷ ಮಿಥುನ್ ಕುಲಾಲ್ , ತರಬೇತಿದಾರ ಆಕಾಶ್ ಗುರುವಾಯನಕೆರೆ , ಸೃಜನ್ ಮಾಲಾಡಿ , ಸಂದೇಶ್ ಮದ್ದಡ್ಕ ಸಂತೋಷ್ ಅಳಿಯೂರು ಮತ್ತು ಪೋಷಕರು ಉಪಸ್ಥಿತರಿದ್ದರು.
























