ಮಂಡ್ಯ: ಶ್ರೀರಂಗಪಟ್ಟಣದ ಬಲಮುರಿಯ ಕಾವೇರಿ ನದಿಯಲ್ಲಿ ಈಜುವುದಕ್ಕೆಂದು ಹೋದ ಇಬ್ಬರು ಯುವಕರು ಮೃತಪಟ್ಚ ಘಟನೆ ವರದಿಯಾಗಿದೆ.
ಮೃತರನ್ನು ಮೈಸೂರು ನಗರದ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ ಸಂತೆಮರಳಿಯ ತಮರವಾಡಿ ಗ್ರಾಮದ ಮೋಹನ್ ಕುಮಾರ್(21) ಮತ್ತು ಮೈಸೂರಿನ ಜಯಪುರದ ಕೆಳಹಳ್ಳಿ ಗ್ರಾಮದ ರವಿಚಂದ್ರ (21) ಎಂದು ಗುರುತಿಸಲಾಗಿದೆ.
ಇಬ್ಬರೂ ಐಟಿಐ ಮುಗಿಸಿ ಕೇನ್ಸ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬ ಗೆಳೆಯ ವಿಕಾಸ್ ಜೊತೆಗೆ ಬಲಮುರಿ ಪ್ರವಾಸಿ ತಾಣಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
























