ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ನ ಸಭೆಯು ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ 1974ರಲ್ಲಿ ಸ್ಥಾಪನೆಯಾಗಿ 2000 ನಲ್ಲಿ ರಜತ ಮಹೋತ್ಸವ ಆಚರಿಸಲಾಗಿದೆ. ಸುವರ್ಣಮಹೊತ್ಸವದ ನಿಮಿತ್ತ ಐವತ್ತು ತಾಳಮದ್ದಳೆಗಳ ಶ್ರೀ ಮಹಾಭಾರತ ಸರಣಿಯನ್ನು2 ವರ್ಷಗಳ ಹಿಂದೆ ಆರಂಭಿಸಲಾಗಿದ್ದು ಈ ವರೆಗೆ 115 ತಾಳಮದ್ದಳೆಗಳನ್ನು ನಡೆಸಿರುವುದೊಂದು ಯಕ್ಷಗಾನ ಕ್ಷೇತ್ರದ ಇತಿಹಾಸದಲ್ಲಿ ದಾಖಲೆಯಾಗಿದೆ . 2026ರ ಸೆಪ್ಟೆಂಬರ್ ತಿಂಗಳಲ್ಲಿ ಸುವರ್ಣ ವರ್ಷದ ಸಮಾರೋಪ ನಡೆಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿಸ್ವರ್ಣಕಾಯಕ ಸ್ಮರಣ ಸಂಚಿಕೆಯನ್ನು ಹೊರತರಲಿದ್ದು ವಿಜ್ಞಾಪನ ಪತ್ರವನ್ನು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಬಿಡುಗಡೆಗೊಳಿಸಿದರು .
ಉಪಾಧ್ಯಕ್ಷರಾದ ಕೆ. ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, , ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ , ಬಿ ಸುಬ್ರಹ್ಮಣ್ಯ ರಾವ್, ಶ್ರೀಧರ ಎಸ್ ಪಿ ಕೃಷ್ಣಾಪುರ ಸಲಹೆಗಳನ್ನು ನೀಡಿದರು.
ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಸುರೇಶ್ ರಾವ್. ಬಿ, ಆಶಾ ರಾವ್ , ಸುಶಾಂತ್ ಕುಮಾರ್ ಪೂರ್ಣಿಮಾ ರಾವ್, ಗೀತಾ ಕುದ್ದಣ್ಣಾಯ ಉಪಸ್ಥಿತರಿದ್ದರು.
























