ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ಉಪ್ಪಿನಂಗಡಿ ಸಹಯೋಗದಲ್ಲಿ ಪಟ್ಲ ಫೌಂಡೇಶನ್ ಹವ್ಯಾಸಿ ಘಟಕ ಮಂಗಳೂರು ಇದರ ಹತ್ತನೇ ಕಾರ್ಯಕ್ರಮವಾಗಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತರನ ಪೌರುಷ ತಾಳಮದ್ದಳೆ ಜರಗಿತು.
ಯಕ್ಷದ್ರುವ ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಗದೀಶ ಶೆಟ್ಟಿ .ಕೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು .
ಕಳೆದ 11 ವರ್ಷಗಳಿಂದ ಯಕ್ಷಗಾನದ ಸಮಗ್ರ ಬೆಳವಣಿಗೆಗೆ ಪಟ್ಲ ಫೌಂಡೇಶನ್ ವತಿಯಿಂದ ನಡೆಸಲಾಗುತ್ತಿರುವ ಕಾರ್ಯಕ್ರಮಗಳು ಅಪೂರ್ವವಾಗಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.. ಹವ್ಯಾಸಿ ಘಟಕದ ಅಧ್ಯಕ್ಷ ರಾಜಾರಾಮ ಹೊಳ್ಳ ಕೈ, ಕಾರ್ಯದರ್ಶಿ ವಿನಯಾ ಆಚಾರ್ ಹೊಸಬೆಟ್ಟು, ಕಾಳಿಕಾಂಬಾ ಯಕ್ಷಕಲಾ ಟ್ರಸ್ಟಿನ ಗೌರವ ಅಧ್ಯಕ್ಷ ಉಮೇಶ ಶೆಣೈ ,ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಂಬಾ ಪ್ರಸಾದ ಪಾತಾಳ,ಬಿ ಸುಬ್ರಹ್ಮಣ್ಯರಾವ್, ಸುರೇಶ ಪುತ್ತುರಾಯ ಇಚ್ಚೂರು,ಗೀತಾ ಕುದ್ದಣ್ಣಾಯ, ಗಂಗಾಧರ ಟೈಲರ್ ಉಪ್ಪಿನಂಗಡಿ, ಸುರೇಶ ರಾವ್. ಬಿ ಆಶಾ ರಾವ್, ಸುಶಾಂತ್, ಹರೀಶ ಆಚಾರ್ಯ ಪುಳಿತ್ತಡಿ ಉಪಸ್ಥಿತರಿದ್ದರು.

ಉತ್ತರನ ಪೌರುಷ ತಾಳಮದ್ದಳೆ ಯಲ್ಲಿ ಭಾಗವತರಾಗಿ ರಾಜಾರಾಮ ಹೊಳ್ಳ, ಪದ್ಮನಾಭ ಕುಲಾಲ್ ಇಳಂತಿಲ ಹಿಮ್ಮೇಳದಲ್ಲಿ ಮುರಳಿಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್, ಹರಿಶ್ಚಂದ್ರ ನಾಯ್ಗ
ಅರ್ಥದಾರಿಗಳಾಗಿ ವಿನಯ ಆಚಾರ್ ಹೊಸಬೆಟ್ಟು (ಉತ್ತರ) ದಿವಾಕರ ಆಚಾರ್ಯ ಗೇರುಕಟ್ಟೆ (ಉತ್ತರೆ) ಶ್ರೀಧರ ಎಸ್ ಪಿ ಕೃಷ್ಣಾಪುರ (ಗೋಪಾಲಕ) ಗಣೇಶ ಕುಂಜತ್ತೂರು (ಬೃಹನ್ನಳೆ) ಭಾಗವಹಿಸಿದ್ದರು. ಅತಿಥಿ ಕಲಾವಿದರನ್ನು ಶಾಲು ,ಪುಸ್ತಕ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಕೆ. ಮಹಾಲಿಂಗೇಶ್ವರ ಭಟ್ ವಂದಿಸಿದರು. ಶ್ರೀಧರ ಎಸ್ ಪಿ ಕಾರ್ಯಕ್ರಮ ನಿರೂಪಿಸಿದರು.
























