ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿದೇಶಿಗರಿಂದ ಮತದಾನ?

ವಿಮಾನ ನಿಲ್ದಾಣಗಳಲ್ಲಿ ಬಂಧಿತರಾದವರ ಬೆರಳಿನಲ್ಲಿತ್ತು ಮತದಾನದ ಮಸಿ ಗುರುತು

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಯಲ್ಲಿ ಮತ ಚಲಾಯಿಸಿರುವ ಆರೋಪದ ಮೇಲೆ ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದ ಹಲವರನ್ನು ಚೆನ್ನೈ ಮತ್ತು ಮಧುರೈ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತರಲ್ಲಿ ಹೆಚ್ಚಿನವರು ಶ್ರೀಲಂಕಾ ಮೂಲದವರಾಗಿದ್ದು, ಚೆನ್ನೈನಲ್ಲಿ ಕನಿಷ್ಠ 10 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದಾರೆ. ಶ್ರೀಲಂಕಾದ ರಂಜಿನಿ (59), ಸರ್ಫುದೀನ್ (68), ನಿಲಾಂತಿ (44), ಜಯಂತನ್ (40), ಚಾರ್ಲಿ ಬಾಲಚಂದ್ರನ್ (48), ಚಕ್ರವರ್ತಿ ಲೋಗಪ್ರಿಯಾ (50) ಮತ್ತು ಸುನಿತಾ ಚಕ್ರವರ್ತಿ (48) ಬಂಧಿತರಾಗಿದ್ದಾರೆ. ಯುಕೆ ಮೂಲದ ಅಯ್ಯಾದುರೈ (53), ಇಂಡೋನೇಷ್ಯಾದ ಟಿಟ್ಟಿನ್ ಮರಿಯಟ್ಟಿ (47) ಹಾಗೂ ಕೆನಡಾ ಮೂಲದ ಜಿತ್ತೇಂದ್ರನಾಥ್ (38) ಕೂಡ ಬಂಧಿತರ ಪಟ್ಟಿಯಲ್ಲಿದ್ದಾರೆ.





















































 
 

ಪ್ರಯಾಣಕ್ಕೂ ಮುನ್ನ ನಡೆದ ತಪಾಸಣೆಯ ವೇಳೆ ಪ್ರಯಾಣಿಕರ ತೋರು ಬೆರಳಿನಲ್ಲಿ ಮತದಾನ ಗುರುತಿನ ಮಸಿ ಕಂಡುಬಂದ ಹಿನ್ನೆಲೆಯಲ್ಲಿ ಬಂಧನ ನಡೆದಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳ ಪ್ರಕಾರ, ಶ್ರೀಲಂಕಾ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ವ್ಯಕ್ತಿಗಳ ಬಳಿ ಭಾರತದ ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿಗಳೂ ಪತ್ತೆಯಾಗಿವೆ. ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರು ಭಾರತೀಯ ಮತದಾರರ ಗುರುತಿನ ಚೀಟಿ ಹೊಂದಿರುವುದು ಭಾರತೀಯ ಕಾನೂನು ಪ್ರಕಾರ ಅಕ್ರಮ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಈ ದಾಖಲೆಗಳನ್ನು ಹೇಗೆ ಪಡೆದರು ಹಾಗೂ ಇತ್ತೀಚಿನ ಚುನಾವಣೆಯಲ್ಲಿ ಮತ ಚಲಾಯಿಸಲು ಅದನ್ನು ಬಳಸಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಒಟ್ಟು ಬಂಧಿತರ ಸಂಖ್ಯೆ ಎಷ್ಟು ಎಂಬ ನಿಖರ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ನಡೆದಿದ್ದರೂ ವಿದೇಶಿ ನಾಗರಿಕರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಮುಂದುವರಿದಿರುವುದು ಸಾಕಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ ನಡೆದ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸುಮಾರು 74 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, 27.5 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿತ್ತು.

error: Content is protected !!
Scroll to Top