ಅಕ್ರಮ ಮರಳು ದಾಸ್ತಾನು ಪತ್ತೆ: ಪ್ರಕರಣ ದಾಖಲು

ಉಪ್ಪಿನಂಗಡಿ: ಬೆಳ್ತಂಗಡಿಯ ‌ಕರಾಯ ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಉಪ್ಪಿನಂಗಡಿ ‌ಪೊಲೀಸರು ಪತ್ತೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹುಸೇನ್ ಎಂಬವರಿಗೆ ‌ಸೇರಿದ ಜಾಗದಲ್ಲಿ ಮರಳು ಅಕ್ರಮ ದಾಸ್ತಾನು ಇರಿಸಲಾಗಿತ್ತು. ಉಪ್ಪಿನಂಗಡಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಕುಪ್ಪೆಟ್ಟಿ ಹೊಳೆಯಿಂದ ಅಕ್ರಮವಾಗಿ ಸುಮಾರು ಎರಡು ಟನ್‌ಗಳಷ್ಟು ಮರಳು ಸಂಗ್ರಹಿಸಿ ಇಡಲಾಗಿತ್ತು. ಮರಳನ್ನು ವಶಕ್ಕೆ ಪಡೆದಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.





















































 
 

error: Content is protected !!
Scroll to Top