ಮಳೆ ನೀರು ತುಂಬಿದ್ದ ಹೊಂಡದಲ್ಲಿ ‌ಮುಳುಗಿ ಈಜಲು ಹೋಗಿದ್ದ ಬಾಲಕ ಸಾವು

ಕಲಬುರ್ಗಿ: ಮಳೆ ನೀರು ತುಂಬಿದ್ದ ಹೊಂಡದಲ್ಲಿ ಈಜಾಟಕ್ಕೆ ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ‌ ಘಟನೆ ವಾಡಿ ಪಟ್ಟಣದ ಹೊರವಲಯದಲ್ಲಿರುವ ಡಿಗ್ಗಿ ‌ತಾಂಡಾ‌ದಲ್ಲಿ ನಡೆದಿದೆ.

ಮೃತನನ್ನು ರಿತೇಶ್(12) ಎಂದು ಗುರುತಿಸಲಾಗಿದೆ.

ರೈಲ್ವೆ ಕಾಮಗಾರಿಗೆಂದು ಬೃಹತ್ ಹೊಂಡವೊಂದನ್ನು ತೋಡಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯ ಕಾರಣಕ್ಕೆ ಹೊಂಡ ತುಂಬಿತ್ತು. ಈ ಹೊಂಡಕ್ಕೆ ರಿತೇಶ್ ತನ್ನ ಗೆಳೆಯರ ಜೊತೆಗೆ ಈಜಾಟಕ್ಕೆ ಹೋಗಿದ್ದನು. ಆದರೆ ಆಳ ಅರಿಯದೆ ಆತ ನೀರಿನಲ್ಲಿ ಮುಳುಗಿ ಮೃತಪಟ್ಚಿರುವುದಾಗಿದೆ.





















































 
 

ರಿತೇಶ್ ಮುಳುಗುತ್ತಿದ್ದ ಹಾಗೆ ಈತನ ಗೆಳೆಯರು ಕಿರುಚಿದ್ದು, ಸಾರ್ವಜನಿಕರು ಬಂದು ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.

ವಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top