ಹತ್ತನೇ ತರಗತಿ ಟಾಪರ್ ವಿದ್ಯಾರ್ಥಿನಿ ಧನ್ವಿ ಹೆಬ್ಬಾರ್‌ಗೆ ಸನ್ಮಾನ

ಉಡುಪಿ: ಸಾಧನೆ ಮಾಡಲು ತಂದೆ ತಾಯಿ , ಗುರುಹಿರಿಯರ ಮಾರ್ಗದರ್ಶನ ಅತ್ಯಂತ ಮುಖ್ಯ. ಮಕ್ಕಳ ಸಾಧನೆಯ ಯಶಸ್ಸನ್ನು ಹೆಚ್ಚು ಸಂಭ್ರಮಿಸುವವರು ಅವರುಗಳ ತಾಯಿ ಆಗಿರುತ್ತಾರೆ. ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಮುಖ್ಯ. ಸಾಧಕ ವಿದ್ಯಾರ್ಥಿನಿ ಧನ್ವಿ ಹೆಬ್ಬಾರ್ ಶಾಲೆ ಮತ್ತು ಮನೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಎಂದು ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರಂಗ ಪೈ ಸಿದ್ಧಾಪುರ ಮಾತನಾಡಿದರು.

ಪಿ.ಆರ್. ಎನ್.‌ ಅಮೃತ ಭಾರತಿ ವಿದ್ಯಾ ಕೇಂದ್ರ ಸಿಬಿಎಸ್ಇ ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿನಿ ಧನ್ವಿ ಹೆಬ್ಬಾರ್ ಅವರಿಗೆ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಅವರು ಸನ್ಮಾನಿಸಿ ಮಾತನಾಡಿದರು.

ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಅಂಗಳ – 2026 ಸನ್ಮಾನ ಕಾರ್ಯಕ್ರಮ ಹೆಬ್ರಿ ನೆಹರು ನಗರದ ಬಾಲಚಂದ್ರ ಹೆಬ್ಬಾರ್ ಅವರ ಸ್ವಗೃಹ ರಾಮಧಾಮದಲ್ಲಿ ನಡೆಯಿತು.





















































 
 

ವೇದಿಕೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಗುರುದಾಸ್ ಶೆಣೈ ಹೆಬ್ರಿ , ಸಾಧಕಿಯ ತಂದೆ- ತಾಯಿಗಳಾದ ಬಾಲಚಂದ್ರ ಹೆಬ್ಬಾರ್ ಮತ್ತು ಸುಮಲತಾ ಹೆಬ್ಬಾರ್, ಸಾಧಕಿ ಧನ್ವಿ ಹೆಬ್ಬಾರ್ ವಉಪಸ್ಥಿತರಿದ್ದರು .

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ ಚಾರ ಅವರು ಕಾರ್ಯಕ್ರಮವನ್ನು ಸಂಘಟಿಸಿ, ನಿರೂಪಿಸಿದರು .

ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶಾರೀರಿಕ ಪ್ರಮುಖ್ ವಿಜಯ ಕುಮಾರ ಶೆಟ್ಟಿ, ಅಮೃತ ಭಾರತಿ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ,ಅಮೃತ ಭಾರತಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಪರ್ಣಾ ಆಚಾರ್ ಉಪಸ್ಥಿತರಿದ್ದರು.

error: Content is protected !!
Scroll to Top