ಮೇಲಿನಕುರುವಳ್ಳಿಯಲ್ಲಿ ಕಾಣಸಿಕ್ಕಿದ ಎರಡು ಚಿರತೆ ಮರಿಗಳು: ಗ್ರಾಮಸ್ಥರಲ್ಲಿ ಆತಂಕ

ತೀರ್ಥಹಳ್ಳಿ: ತಾಲೂಕಿನ ಮೇಲಿನಕುರುವಳ್ಳಿ ಗ್ರಾಮದಲ್ಲಿ ಎರಡು ಚಿರತೆ ಮರಿಗಳು ಕಾಣ ಸಿಕ್ಕಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಈ ಚಿರತೆ ಮರಿಗಳು ಕುರುವಳ್ಳಿಯಿಂದ ಹರಳಿಮಠಕ್ಕೆ ಹೋಗುವ ರಸ್ತೆಯಲ್ಲಿ ಕಾಣಸಿಕ್ಕಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಈ ಘಟನೆ ಇಂದು ಬೆಳಗ್ಗೆ ನಡೆದಿದ್ದು‌ ಮರಿಗಳ ಜೊತೆಗೆ ಚಿರತೆಯೂ ಇರಬಹುದೇನೋ ಎಂಬ ಭಯ ಗ್ರಾಮದಲ್ಲಿ ಆವರಿಸಿದೆ.

ಈ ಮಾಹಿತಿಯನ್ನು ಅರಣ್ಯ ಇಲಾಖಾ ಸಿಬ್ಬಂದಿಗೂ ತಲುಪಿಸಲಾಗಿದ್ದು, ಯಾವುದೇ ಕಾರಣಕ್ಕೂ ಚಿರತೆ ಮರಿಗಳಿಗೆ ಆತಂಕವಾಗುವಂತಹ ಸ್ಥಿತಿ ನಿರ್ಮಾಣ ಮಾಡದಂತೆ ಅವರು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.





















































 
 
error: Content is protected !!
Scroll to Top