ದನ ತೊಳೆಯಲು ಹೋದ ಬಾಲಕ ನೀರಿಗೆ ಬಿದ್ದು ಸಾವು

ತುಮಕೂರು: ಹಸುವನ್ನು ಸ್ನಾನ ಮಾಡಿಸುವ ಉದ್ದೇಶದಿಂದ ಕೆರೆ ಸಮೀಪ ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆರೂರಿನ ಕಿಟ್ಟದಕುಪ್ಪೆ ಎಂಬಲ್ಲಿ ನಡೆದಿದೆ.

ಮಧು(12) ಎಂಬಾತನೇ ‌ಮೃತ ಬಾಲಕ. ಮಧ್ಯಾಹ್ನದ ವೇಳೆಗೆ ಮಧು ದನಗಳನ್ನು ತೊಳೆಯುವುದಕ್ಕಾಗಿ ಕೆರೆಯತ್ತ ‌ತೆರಳಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈಜು ಬಾರದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಕುಟುಂಬಸ್ಥರು ಮತ್ತು ಗ್ರಾಮಸ್ಥರು ಬಾಲಕನಿಗಾಗಿ ಶೋಧ ಕಾರ್ಯ ನಡೆಸಿದ್ದರೂ ಆತನ ಸುಳಿವು ಪತ್ತೆಯಾಗಿಲ್ಲ. ಅಗ್ನಿಶಾಮಕ ದಳ ಸಹ ಬಾಲಕನ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು. ಆದರೆ ಗುರುವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಆತನ ಶವ ಪತ್ತೆಯಾಗಿದೆ.























































 
 

ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top