140 ಕೋಳಿಗಳನ್ನು ಬಲಿ ಪಡೆದ ಮದುವೆಯ ಡಿ.ಜೆ. ಸದ್ದು

ಲಕ್ನೋ: ಮದುವೆಯ ಮೆರವಣಿಗೆಯಲ್ಲಿ ಬಳಸಿದ ಬಾರಿ ಸದ್ದಿನ ಡಿ.ಜೆ. ಗೆ ತನ್ನ 140 ಕೋಳಿಗಳು ಸಾವನ್ನಪ್ಪಿವೆ ಎಂದು ಆರೋಪಿಸಿ, ಕೋಳಿಗಳ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾನೆ.

ಉತ್ತರ ಪ್ರದೇಶದ ಸುಲ್ತಾನಪುರದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿರುವುದಾಗಿದೆ. ತನ್ನ ಕೋಳಿ ಸಾಕಾಣಿಕೆ ಪ್ರದೇಶದ ಸಮೀಪ ಭಾರೀ ಸದ್ದಿನ ಜೊತೆಗೆ ಡಿ. ಜೆ. ಹಾಕಿಕೊಂಡು ಮದುವೆಯ ಮೆರವಣಿಗೆ ಸಾಗಿದೆ. ಇದರಿಂದ ಭಯಭೀತವಾದ 180 ಕೋಳಿಗಳು ‌ಪ್ರಾಣ ಬಿಟ್ಟಿವೆ‌ ಎಂದು ಸಬೀರ್ ಅಲಿ ಎಂಬವರು ದೂರಿನಲ್ಲಿ ಹೇಳಿದ್ದಾರೆ.

ದೂರು ಸ್ವೀಕರಿಸಿರುವ ಪೊಲೀಸರು ಅನುಮತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಶಬ್ಧ ಬಳಕೆ ಮಾಡಲಾಗಿದೆಯೇ?, ಅತಿಯಾದ ಶಬ್ಧದ ಭಯದಿಂದಲೇ ಕೋಳಿಗಳು ‌ಸಾವನ್ನಪ್ಪಿವೆಯೇ? ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ.























































 
 

error: Content is protected !!
Scroll to Top