ಬೆಂಗಳೂರು: ತಾಯಿಯೊಂದಿಗೆ ಬಟ್ಟೆ ಖರೀದಿಸಲು ಬಂದು ಬೈಕ್ ಪಾರ್ಕ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿ ಬಿದ್ದು ಶಾಕ್ ಹೊಡೆದು ಮಗ ಮೃತಪಟ್ಟಿದ್ದು, ಇದನ್ನು ಕಂಡ ತಾಯಿ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಹೃದಯ ವಿದ್ರಾವಕ ಘಟನೆ ಶಿವಾಜಿನಗರದಲ್ಲಿ ನಡೆದಿದೆ.
ಮೃತನನ್ನು ಸಯ್ಯದ್ ಸುಫಿಯಾನ್ (17) ಎಂದು ಗುರುತಿಸಲಾಗಿದೆ. ಮಗನ ಸಾವನ್ನು ಕಣ್ಣಾರೆ ಕಂಡು ಅನಾರೋಗ್ಯಕ್ಕೆ ತುತ್ತಾದ ತಾಯಿ ಉಮೇ ಸಲ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದ್ವಿತೀಯ ಪಿಯುಸಿಗೆ ಕಾಲೇಜಿಗೆ ಹೋಗಲು ಬಟ್ಟೆ ಖರೀದಿಗೆಂದು ಆತ ತಾಯಿಯ ಜೊತೆಗೆ ಬಂದಿದ್ದ. ತನ್ನ ಸ್ಕೂಟಿಯನ್ನು ಪಾರ್ಕ್ ಮಾಡಲು ಹೋದ ವೇಳೆ ಭೀಕರವಾಗಿ ಗಾಳಿ, ಮಳೆ ಬಂದಿದೆ. ಇದರಿಂದ ವಿದ್ಯುತ್ ತಂತಿ ಕಡಿದು ಸೈಯದ್‌ಗೆ ತಾಗಿ ಆತ ಮೃತಪಟ್ಟಿದ್ದಾನೆ. ಆತನ ಮರಣವನ್ನು ಬೌರಿಂಗ್ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.
ಮಗನ ಸಾವಿನ ಸುದ್ದಿ ಕೇಳಿದ ತಾಯಿ ಅಲ್ಲೇ ಕುಸಿದು ಬಿದ್ದಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

























