ಪುಟ್ಟ ಮಗುವಿನ ಶವ ತೇಲುತ್ತಿರುವ‌ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆ

ಬೆಂಗಳೂರು: ಪುಟಾಣಿ ಮಗುವಿನ ಶವವೊಂದು ‌ಮಾಗಡಿ ಕೆರೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುದೂರು ‌ಪೊಲೀಸ್ ಠಾಣಾ ವ್ಯಾಪ್ತಿಯ ಬಸವಣ್ಣ ದೇಗುಲದ ಬಳಿ ಈ ದೃಶ್ಯ ಕಂಡು ಬಂದಿದೆ. ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಈ ದೃಶ್ಯವನ್ನು ಮೊದಲು ನೋಡಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರ ಮಾಹಿತಿಯನ್ವಯ ಮಗು ಸತ್ತು ಸುಮಾರು ಎರಡು ತಿಂಗಳುಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.























































 
 

ಈ ಬಗ್ಗೆ ತನಿಖೆ ಆರಂಭ ಮಾಡಿರುವ ಪೊಲೀಸರು ಮಗುವಿನ ಈ ಸ್ಥಿತಿಗೆ ಕಾರಣ ಏನು?, ತಾಯಿಯೂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾ?, ಮಗುವನ್ನು ಯಾರಾದರೂ ಕೆರೆಗೆಸೆದು ಕೊಂದಿರಬಹುದಾ? ಎಂಬೆಲ್ಲಾ ಆಯಾಮದಲ್ಲಿ ಉತ್ತರ ಹುಡುಕುತ್ತಿದ್ದಾರೆ.

error: Content is protected !!
Scroll to Top