ಪುತ್ತೂರು: ಹಠಾತ್ ಆರೋಗ್ಯ ಕೆಟ್ಟು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮುಕ್ರಂಪಾಡಿಯಲ್ಲಿ ನಡೆದಿದೆ.
ಮೃತರನ್ನು ಮುಕ್ರಂಪಾಡಿ ನಿವಾಸಿ ಚೈತ್ರ ಪೂಜಾರಿ (31) ಎಂದು ಗುರುತಿಸಲಾಗಿದೆ.
ಚೈತ್ರಾ ಅವರ ಆರೋಗ್ಯ ಹಠಾತ್ತಾಗಿ ಹದೆಗೆಟ್ಟಿದೆ. ಚಿಕಿತ್ಸೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿರುವುದಾಗಿದೆ.
ಮೃತ ಚೈತ್ರಾ ಅವರು ಪತಿ, ಪುತ್ರಿಯನ್ನು ಅಗಲಿದ್ದಾರೆ.

























