ಬ್ರೈನ್ ಸ್ಟ್ರೋಕ್‌ಗೆ 25 ರ ಯುವತಿ ಸಾವು

ಬೆಂಗಳೂರು: ತಾಯಿ ಜೊತೆಗೆ ಮಾತನಾಡುತ್ತಿದ್ದ ಸಮಯದಲ್ಲೇ ಬ್ರೈನ್ ಸ್ಟ್ರೋಕ್‌ಗೆ ತುತ್ತಾಗಿ, ಚಿಕಿತ್ಸೆ ಫಲಕಾರಿಯಾಗದೆ ಯುವತಿಯೊಬ್ಬಳು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಶ್ವೇತಾ (25) ಮೃತ ದುರ್ದೈವಿ.

ಎ. 25 ರಂದು ಕೆಲಸ ಮುಗಿಸಿ ಮನೆಗೆ ಬಂದ ಶ್ವೇತಾ ತಮ್ಮ ತಾಯಿಯ ಜೊತೆಗೆ ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ಅವರು ಬ್ರೈನ್ ಸ್ಟ್ರೋಕ್ ಗೆ ತುತ್ತಾಗಿ ಕುಸಿದು ಬಿದ್ದಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುವ ದಾರಿಯಲ್ಲೇ ಶ್ವೇತಾ ಕೋಮಾ‌ಗೆ ಜಾರಿದ್ದು, ಆಗಲೇ ಆಕೆಯ ಅಂಗಾಂಗ ದಾನಕ್ಕೆ ಕುಟುಂಬ ವಲಯ ನಿರ್ಧರಿಸಿತ್ತು.























































 
 

ಇಂದು ಬೆಳಗ್ಗೆ ಶ್ವೇತಾ ಅವರು ಮೃತಪಟ್ಟಿದ್ದಾರೆ. ಆದ್ದರಿಂದ ಅವರ ಅಂಗಾಂಗ ದಾನ ಮಾಡಲು ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. ಶ್ವೇತಾ ಮೃತದೇಹವನ್ನು ‌ಮುಂದಿನ ವಿಧಿವಿಧಾನಗಳಿಗಾಗಿ ಹಾಸನಕ್ಕೆ ತರಲಾಗಿದೆ.

error: Content is protected !!
Scroll to Top