ಸೋಣಂದೂರಿನ ವ್ಯಕ್ತಿ ನಾಪತ್ತೆ

ಉಪ್ಪಿನಂಗಡಿ: ಕಡಬದ ಶಿರಾಡಿಯ ಸೋಣಂದೂರಿನ 44 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ತಡವಾಗಿ ವರದಿಯಾಗಿದೆ.

ನಾಪತ್ತೆಯಾದವರನ್ನು ಜಗದೀಶ್ ಎಸ್. ಎಸ್. ಎಂದು ಗುರುತಿಸಲಾಗಿದೆ.

ಸೋಣಂದೂರಿನಲ್ಲಿ ಪ್ರತ್ಯೇಕ ಮನೆಯಲ್ಲಿ ಇವರು ವಾಸವಾಗಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದ ಇವರ ಪತ್ನಿ ಮತ್ತು ಮಕ್ಕಳು ಹಾಸನದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಂದೆಯ ಮನೆಯಲ್ಲಿ ಪ್ರತಿನಿತ್ಯ ಅವರು ಊಟ, ಚಹಾ ಸೇವನೆಗೆ ಹೋಗುತ್ತಿದ್ದರು.























































 
 

ಎ. 6 ರಂದು ಬೆಳಗ್ಗೆ 9 ಗಂಟೆಯ ವರೆಗೆ ಮನೆಯಲ್ಲಿ ಇದ್ದ ಅವರು, ಗಂಟೆ 10.30 ಆದರೂ ಚಹಾಕ್ಕೆ ತಂದೆಯ ಮನೆಗೆ ಬಂದಿಲ್ಲ. ಈ ವೇಳೆ ಅವರಿಗಾಗಿ ಮನೆಯವರು ಹುಡುಕಾಟ ನಡೆಸಿದ್ದಾರೆ. ಆದರೆ ಅವರು ಪತ್ತೆಯಾಗಿಲ್ಲ. ಅವರ ಮೊಬೈಲ್ ಫೋನ್ ಮತ್ತು ಬೈಕ್ ಮನೆಯಲ್ಲೇ ಇತ್ತು.

ಆರಂಭದಲ್ಲಿ ಅವರು ಕೆಲಸಕ್ಕೆ ಹೋಗಿರಬಹುದು ಎಂದು ಮನೆಯವರು ತಿಳಿದಿದ್ದು, ಆದರೆ ಮಾ ರನ್ ದಿನವೂ ಅವರು ಪತ್ತೆ ಇಲ್ಲ. ಈ ಹಿನ್ನೆಲೆ ಮತ್ತೆ ಹುಡುಕಾಟ ನಡೆಸಿದ್ದರೂ ಅವರ ಸುಳಿವು ಸಿಕ್ಕಿಲ್ಲ. ಈ ಹಿಂದೆಯೂ ಅವರು ಎರಡು ಮೂರು ಬಾರಿ ಮನೆ ಬಿಟ್ಟು ಹೋಗಿದ್ದು ಮರಳಿ ಬಂದಿದ್ದರು. ಈ ಬಾರಿಯೂ ಹಾಗೆಯೇ ನಡೆದಿರುತ್ತದೆ ಎಂದು ತಿಳಿದಿದ್ದು, ಆದರೆ ದಿನಗಳು ಉರುಳಿದರೂ ಅವರು ಮರಳಿ ಬಾರದ ಹಿನ್ನೆಲೆ ತಡವಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಈ ವ್ಯಕ್ತಿಯ ಕುರಿತು ಯಾವುದೇ ಸುಳಿವು ಇದ್ದಲ್ಲಿ ತಿಳಿಸುವಂತೆ ಉಪ್ಪಿನಂಗಡಿ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

error: Content is protected !!
Scroll to Top