ಕೊಪ್ಪಳ: ಜಮೀನೊಂದರ ಗೋದಾಮಿನಲ್ಲಿ ಅನ್ನ ಭಾಗ್ಯ ಯೋಜನೆಯ ಸುಮಾರು 150 – 200 ಟನ್ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಘಟನೆ ಕೂಕನಹಳ್ಳಿಯಲ್ಲಿ ನಡೆದಿದ್ದು, ಇದನ್ನು ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಳೆಪ್ಪ ಎಂಬವರ ಜಮೀನಿನ ಗೋದಾಮಿನಲ್ಲಿ ಅಕ್ರಮವಾಗಿ ಅನ್ನ ಭಾಗ್ಯ ಯೋಜನೆಯ ಅಕ್ಕಿ ದಾಸ್ತಾನಿಡಲಾಗಿದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿರುವುದಾಗಿದೆ.
ಸುಮಾರು ಸಾವಿರಕ್ಕೂ ಅಧಿಕ ಪಡಿತರ ತುಂಬಿದ ಗೋಣಿಗಳು ಪೊಲೀಸರ ವಶಕ್ಕೆ ಸಿಕ್ಕಿದೆ. ಆಹಾರ ಇಲಾಖೆಯ ಅಧಿಕಾರಗಳು ಸಹ ಸ್ಥಳದಲ್ಲಿ ಸಿಕ್ಕಿರುವ ಅಕ್ಕಿಯನ್ನು ಪರಿಶೀಲನೆ ನಡೆಸಿದ್ದಾರೆ.

























