ಮಂಗಳೂರು: ಕುಟುಂಬ ಕಲಹದ ಹಿನ್ನೆಲೆ ಪತ್ನಿಯ ಸಂಬಂಧಿಕರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ ವಾಮಂಜೂರಿನ ನವೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವೀನ್ ಪತ್ನಿ ವಿಚ್ಛೇದನ ಪಡೆದು ಕೆಲವು ತಿಂಗಳುಗಳಿಂದ ಜೋಕಟ್ಟೆಯಲ್ಲಿ ಬೇರೆ ವಾಸವಿದ್ದರು. ಇದೇ ಸಿಟ್ಟಿನಲ್ಲಿ ನವೀನ್ ಕತ್ತಿ ಹಿಡಿದು ಜೋಕಟ್ಟೆಗೆ ರಾತ್ರಿ ಬೈಕ್ನಲ್ಲಿ ಆಗಮಿಸಿದ್ದಾನೆ.
ನವೀನ್ ಕಳವರದ ದೇವಿಪ್ರಸಾದ್ ಎಂಬವರ ಮೇಲೆ ಹಲ್ಲೆ ನಡೆಸುವ ಹಿನ್ನೆಲೆ ಆಯುಧದ ಜೊತೆ ಬಂದಿದ್ದಾನೆ. ದೇವಿಪ್ರಸಾದ್ ಮತ್ತು ಪೋಷಕರ ಮೇಲೆ ಹಲ್ಲೆಗೆ ಪ್ರಯತ್ನ ಮಾಡಿದ್ದಾನೆ. ತಕ್ಷಣವೇ ದೇವಿಪ್ರಸಾದ್ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬರುತ್ತಿದ್ದಂತೆ ಆರೋಪಿ ನವೀನ್ ಓಡಿ ಹೋಗಲು ಬೈಕ್ ಹತ್ತಿದ್ದು, ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನವೀನ್ ತಂದಿದ್ದ ಕತ್ತಿಯನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

























