ಎ. 27: ಲೋಕ ಕಲ್ಯಾಣಕ್ಕಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸಿಯಾಳಾಭಿಷೇಕ

ಪುತ್ತೂರು: ಲೋಕ ಕಲ್ಯಾಣಕ್ಕಾಗಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಎ. 27 ರಂದು ವಿಶೇಷ ಸಿಯಾಳಾಭಿಷೇಕ ಸೇವೆ ನಡೆಯಲಿದೆ.

ಶ್ರೀ ದೇವರಿಗೆ ಬೆಳಗ್ಗೆ 9 ಗಂಟೆಯಿಂದ 11 ಗಂಟೆಯ ವರೆಗೆ ಸೀಯಾಳಾಭಿಷೇಕ ನಡೆಯಲಿದೆ.

ಈ ಪುಣ್ಯ ಕಾರ್ಯಕ್ಕೆ ಶ್ರೀ ದೇವರಿಗೆ ಎಳನೀರು ಸಮರ್ಪಣೆ ಮಾಡುವ ಭಕ್ತರು ಆನದಿನ 9.30 ಕ್ಕೆ ಮುಂಚಿತವಾಗಿ ದೇವಾಲಯದ ಒಳಗೆ ಸಮರ್ಪಿಸುವಂತೆ ಮನವಿ ಮಾಡಲಾಗಿದೆ.























































 
 

ಈ ಮಹತ್ಕಾರ್ಯದಲ್ಲಿ ಹೆಚ್ಚಿನ ಭಕ್ತಬಾಂಧವರು ಪಾಲ್ಗೊಂಡು, ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ವ್ಯವಸ್ಥಾಪನಾ ಮಂಡಳಿ ವಿನಂತಿಸಿಕೊಂಡಿದೆ.

error: Content is protected !!
Scroll to Top