ಪುತ್ತೂರು: ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ರಿ. ಸಂಯೋಜನೆಯಲ್ಲಿ ಶ್ರೀ ಮಹಾಭಾರತ ಸರಣಿಯ 113 ನೇ ತಾಳಮದ್ದಳೆ ಕರಂಡಕಾಸುರ ಕಾಳಗ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ದೇವಿ ಪ್ರಸಾದ ಆಚಾರ್ಯ ಗುರುವಾಯನಕೆರೆ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ್ತ ಪಾಂಗಣ್ಣಾಯ ಸಹಕರಿಸಿದರು.
ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ), ದಿನೇಶ್ ಭಟ್ ಬಳೆಂಜ (ಅರ್ಜುನ), ಶ್ರುತಿ ವಿಸ್ಮಿತ್ (ಶುಕತುಂಡ), ಅಂಬಾ ಪ್ರಸಾದ್ ಪಾತಾಳ (ಕಲುಷಗಾಮಿನಿ), ಸತೀಶ್ ಆಚಾರ್ಯ ಮಾಣಿ (ಜಗಳ ಗ್ರಂಥಿ), ಶ್ರೀಧರ ಎಸ್ಪಿ ಕೃಷ್ಣಾಪುರ (ಹನುಮಂತ 1), ಗೀತಾ ಕುದ್ದಣ್ಣಾಯ (ಹನುಮಂತ 2), ಗುಡ್ಡಪ್ಪ ಬಲ್ಯ (ಕರಂಡಕಾಸುರ) ಭಾಗವಹಿಸಿದ್ದರು.
ಬ್ರಹ್ಮ ಕಲಶ ಸಮಿತಿಯ ಪರವಾಗಿ ಬೊಮ್ಮಯ್ಯ ಬಂಗೇರ ಅವರು ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಅವರಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.
ಟ್ರಸ್ಟಿನ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ಉಪಸ್ಥಿತರಿದ್ದರು. ಶ್ರೀ ಕಾಳಿಕಾಂಬ ಟ್ರಸ್ಟಿನ ಸಂಜೀವ ಪಾರೆಂಕಿ ಸ್ವಾಗತಿಸಿದರು.

























