ಉಪ್ಪಿನಂಗಡಿ: ಬೈಕ್ ನಿಯಂತ್ರಣಕ್ಕೆ ಸಿಗದ ಪರಿಣಾಮ ಸವಾರನೊಬ್ಬ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಹಿರೇಬಂಡಾಡಿ ನಿವಾಸಿ ಲಿಖಿತ್ ಎಂಬವರೇ ಮೃತ ದುರ್ದೈವಿ.
ಲಿಖಿತ್ ಅವರು ಬೈಕ್ನ ನಿಯಂತ್ರಣ ಕಳೆದುಕೊಂಡು ಗುಂಡಿಗೆ ಬಿದ್ದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿರುವುದಾಗಿದೆ.

























