ವಿಚಾರಣಾಧೀನ ಖೈದಿ ಆಸ್ಪತ್ರೆಯ ಬಾತ್‌ರೂಮ್ ಗಾಜು ಒಡೆದು ಪರಾರಿ

ಬಳ್ಳಾರಿ: ವಿಚಾರಣಾಧೀನ ಖೈದಿಯೊಬ್ಬನನ್ನು ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತ ಸ್ನಾನದ ಕೋಣೆಯ ಕಿಟಕಿಯ ಗಾಜು ಹುಡಿ ಮಾಡಿ ತಪ್ಪಿಸಿಕೊಂಡ ಘಟನೆ ನಡೆದಿದೆ.

ಚಲನಚಿತ್ರಗಳಲ್ಲಿ ಬರುವಂತೆ ಆರೋಪಿ ಬಾತ್‌ರೂಮ್‌ಗೆ ಹೋಗುವುದಾಗಿ ‌ತಿಳಿಸಿದ್ದು, ಅಲ್ಲಿಗೆ ಹೋದ ಆತ ಬಾತ್‌ರೂಮ್‌ನ ಗಾಜು ಪುಡಿ ಮಾಡಿ ಅಲ್ಲಿಂದ ಪರಾರಿಯಾಗಿರುವುದಾಗಿದೆ.

ಪರಾರಿಯಾದ ಆರೋಪಿಯನ್ನು ಹರಪ್ಪನಹಳ್ಳಿಯ ಅಣ್ಣಪ್ಪ ಎಂದು ಗುರುತಿಸಲಾಗಿದೆ. ಈತ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದ. ಮರದಿಂದ ಬಿದ್ದ ಪರಿಣಾಮ ಈತನಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆತನನ್ನು ವಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಆತ ಪರಾರಿಯಾಗಿರುವುದಾಗಿದೆ.























































 
 

ನಾಪತ್ತೆಯಾದ ಆರೋಪಿ ಅಣ್ಣಪ್ಪನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

error: Content is protected !!
Scroll to Top