ವಿಜೃಂಭಣೆಯಿಂದ ನಡೆದ ಪುತ್ತೂರು ಜಾತ್ರೆ: ಪಂಜಿಗುಡ್ಡೆ ಈಶ್ವರ ಭಟ್‌ಗೆ ಡಾ. ಪ್ರಸಾದ್ ಭಂಡಾರಿ ಪತ್ರ

ಪುತ್ತೂರು: ಈ ಬಾರಿ ನಡೆದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ವಿಜೃಂಭಣೆಯಿಂದ ನಡೆದಿದೆ.‌

ಈ ಬಗ್ಗೆ ಪುತ್ತೂರಿನ ಪ್ರಸಿದ್ಧ ಡಾಕ್ಟರ್ ಪ್ರಸಾದ್ ಭಂಡಾರಿ ಅವರು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಈ ಬಾರಿಯ ಜಾತ್ರೆ ಸೂಪರ್. ಬಹಳ ವಿಜೃಂಭಣೆಯಿಂದ ನಡೆದಿದೆ. ಇಷ್ಟು ಗ್ರಾಂಡ್ ಆಗಿ ಎಂದೂ ಜಾತ್ರೆ ನಡೆದಿಲ್ಲ. ಎಲ್ಲರಿಗೂ ಕಾಫಿ, ತಿಂಡಿ, ಊಟ, ಅದೂ ತಿನ್ನುವಷ್ಟು. ಯಾವಾಗಲೂ ನೀವೇ ಆಡಳಿತ ನಡೆಸಿದಲ್ಲಿ ಒಳ್ಳೆಯದು. ದೇವರು ನಿಮಗೆ ಸಂಪೂರ್ಣ ಆಶೀರ್ವಾದ ಕೊಡಲಿ ಎಂದು ಹಾರೈಸಿದ್ದಾರೆ.























































 
 
error: Content is protected !!
Scroll to Top