ಪತಿ ಮನೆಯವರ ಕಿರುಕುಳ: ಗೃಹಣಿ ಆತ್ಮಹತ್ಯೆಗೆ ಶರಣು

ಬೆಳಗಾವಿ: ಗೃಹಣಿಯೊಬ್ಬಳು ವರದಕ್ಷಿಣೆಯ ಕುರುಕುಳದಿಂದ ಬೇಸತ್ತು, ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಜ್ಯೋತಿ ನಗರದಲ್ಲಿ ನಡೆದಿದೆ.

ಶ್ರೀನಿಧಿ ಸಂತೋಷ್ ನಾವಿ(28) ಎಂಬವರೇ ಮೃತ ದುರ್ದೈವಿ.

ಶ್ರೀನಿಧಿ ಅವರು ಸಂತೋಷ್ ಜೊತೆಗೆ 2021 ರಲ್ಲಿ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಸಹ ಇವರಿಗಿದ್ದಾರೆ. ಗಂಡ ಮತ್ತು ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.























































 
 

ಕೌಟುಂಬಿಕ ಕಲಹ, ಕಿರುಕುಳದಿಂದ ಬೇಸತ್ತು ಶ್ರೀನಿಧಿ ಅವರು ಕಿಟಕಿಗೆ ‌ಶಾಲಿನಿಂದ ಕಟ್ಟಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಶ್ರೀನಿಧಿ ಅವರು ತವರು ಮನೆಯವರ ಜೊತೆಗೆ ಮಾತನಾಡಬಾರದು ಎಂದು ಅವರ ಮೊಬೈಲ್ ಸಹ ಕಿತ್ತುಕೊಳ್ಳಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಗಂಡ, ಅತ್ತೆ ಮತ್ತು ಇನ್ನಿಬ್ಬರ ‌ವಿರುದ್ಧ ಶ್ರೀನಿಧಿ ಕುಟುಂಬದವರು ದೂರು ದಾಖಲು ಮಾಡಿದ್ದಾರೆ. ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top