ಪೊಳಲಿ: ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ (ರಿ.) ಇದರ 8ನೇ ಸೇವಾ ಯೋಜನೆ ಅಡಿಯಲ್ಲಿ ಭವತಿ ಭಿಕ್ಷಾಂದೇಹಿ ಮೂಲಕ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಜಾತ್ರಾ ಸಂದರ್ಭದಲ್ಲಿ ನಿಧಿ ಸಂಗ್ರಹಣಾ ಅಭಿಯಾನ ನಡೆಸಲಾಗಿದ್ದು, ಒಟ್ಟುಗೂಡಿದ ಒಟ್ಟು ಮೊತ್ತ 1,98,088 ಅನ್ನು ಪೊಳಲಿ ದೇವಸ್ಥಾನದಲ್ಲಿ ಅತಿಥಿಗಳ ಮೂಲಕ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಸಿದ
ಬಿರುವೆರ್ ಕುಡ್ಲ ಸ್ಥಾಪಕ ಅಧ್ಯಕ್ಷರು ಉದಯ್ ಪೂಜಾರಿ, ಉದ್ಯಮಿ ಪ್ರಸಾದ್ ಗರೋಡಿ, ಖ್ಯಾತ ಯೂಟ್ಯೂಬರ್ ವಿಶ್ವನಾಥ್ ಪೂಜಾರಿ ಮತ್ತು ವಿವಿನ್ ಪೂಜಾರಿ, ಲೈಫ್ ಆಫ್ ತುಳು ಯೂಟ್ಯೂಬ್ ರಾಜಶ್ರೀ ಪೊಳಲಿ ಗಣ್ಯರ ಉಪಸ್ಥಿತಿಯಲ್ಲಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಧನಸಹಾಯ ನೀಡಲಾಯಿತು.
ಈ ಸಹಾಯಧನದ ಮೊತ್ತವನ್ನು ಸಮರ್ಥ್ ಕರ್ಪೆ ಅವರಿಗೆ 52,362, ಡಿಂಪನ ಎಕ್ಕಾರು ಕೆಂಚಗುಡ್ಡೆ ನಿವಾಸಿ ಅವರಿಗೆ 74,363, ಮೂಡಬಿದ್ರೆಯ ತಾಲೂಕಿನ ಕಡಂದಲೆ ಗ್ರಾಮದ ನಿವಾಸಿ ಹೃತಿಕ್ ಶೆಟ್ಟಿ ಅವರಿಗೆ 71,363 ಹಸ್ತಾಂತರಿಸಲಾಯಿತು.

























