ಬಯಲಾಟ ನೋಡುತ್ತಿದ್ದವರ ಮೇಲೆ ಸಿಮೆಂಟ್ ಬೋರ್ಡ್ ಬಿದ್ದು ಎರಡು ಸಾವು, ನಾಲ್ವರಿಗೆ ಗಾಯ

ರಾಯಚೂರು: ಬಯಲಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಮೆಂಟ್ ಬೋರ್ಡ್ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತಪಟ್ಚ ಘಟನೆ ನಡೆದಿದ್ದು, ಇದರಿಂದಾಗಿ ಇನ್ನಿಬ್ಬರು ಕಾಲುಗಳನ್ನೇ ಕಳೆದುಕೊಂಡಿದ್ದಾರೆ.

ಬೈಲ್ ಮರ್ಚಡ್ ಗ್ರಾಮದಲ್ಲಿ ಹಳೆಯ ಕಟ್ಟಡ ಒಂದರ ಸಿಮೆಂಟ್ ಬೋರ್ಡ್ ಕುಸಿದು ಈ ದುರಂತ ಸಂಭವಿಸಿದೆ. ಇಬ್ಬರು ಮಕ್ಕಳ ಪ್ರಾಣವೇ ಹೋಗಿದ್ದು, ನಾಲ್ಕು ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.























































ಬಯಲಾಟವನ್ನು ಗ್ರಾಮಸ್ಥರು ಗ್ರಾಮದ ಚಾವಡಿ ಕಟ್ಟೆಯ ಕೆಳಗೆ ಕುಳಿತು ನಾಟಕ ವೀಕ್ಷಿಸುತ್ತಿದ್ದರು. ಹಳೆಯದಾಗಿದ್ದ ಚಾವಡಿ ಕಟ್ಟಡದ ಮೇಲ್ಬಾಗದಲ್ಲಿದ್ದ ಸಿಮೆಂಟ್‌ನ ನಾಮಫಲಕದ ಬೋರ್ಡ್ ಆಯತಪ್ಪಿ ಕೆಳಗೆ ಕುಳಿತಿದ್ದವರ ಮೇಲೆ ಬಿದ್ದಿದೆ. ಮೃತರನ್ನು ವಿಶ್ವನಾಥ್ (8 ವರ್ಷ) ಹಾಗೂ ಸನ್ವಿತಾ (1.6 ವರ್ಷ) ಎಂದು ಗುರುತಿಸಲಾಗಿದೆ.

 
 

ದುರಂತದ ತೀವ್ರತೆಗೆ ಸಿಮೆಂಟ್ ಬೋರ್ಡ್ ಅಡಿಯಲ್ಲಿ ಸಿಲುಕಿದ ಬಸಮ್ಮ (38) ಅವರ ಒಂದು ಕಾಲು ಕಟ್ ಆಗಿದ್ದರೆ, ಅವರ ಮಗಳು ಲಕ್ಷ್ಮಿ (17) ಅವರ ಎರಡು ಕಾಲುಗಳು ಕಟ್ ಆಗಿವೆ. ಇವರ ಜೊತೆಗೆ ವಿಶಾಲಮ್ಮ (20) ಮತ್ತು 4 ವರ್ಷದ ಮಗು ಯಲ್ಲಮ್ಮ ಎಂಬುವವರಿಗೂ ಗಂಭೀರ ಗಾಯಗಳಾಗಿದವೆ. ಎಲ್ಲರನ್ನೂ ರಾಯಚೂರಿನ ಓಪೆಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

error: Content is protected !!
Scroll to Top