ಕಾಡುಕೋಣ ದಾಳಿಗೆ ಯುವಕ ಸಾವು

ಕಳಸ: ಕಾಡುಕೋಣ ದಾಳಿ ನಡೆಸಿದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಕಳಸದ ‌ಮೈದಾಡಿ ಎಸ್ಟೇಟ್‌ನಲ್ಲಿ ನಡೆದಿದೆ.

ಚೇತನ್ (30) ಎಂಬ ಯುವಕನೇ ಮೃತ ದುರ್ದೈವಿ.























































ದಾಳಿಯಲ್ಲಿ ಕಾಡುಕೋಣದ ಕೊಂಬು ಚೇತನ್ ಅವರ ಎದೆಗೆ ಗಂಭೀರ ಪ್ರಮಾಣದಲ್ಲಿ ತಾಗಿದೆ. ಅವರನ್ನು ಕಳಸದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿದೆ.

 
 

ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ಕಳಸ ಭಾಗದಲ್ಲಿ ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದ್ದು, ಇದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ.

error: Content is protected !!
Scroll to Top