ಪುತ್ತೂರು : ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು .
ಶಾಲಾ ಆಡಳಿತ ಸಮಿತಿಯ ಉಪಾಧ್ಯಕ್ಷ ಉಮೇಶ್ ಮಲುವೇಲು ಅವರು ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಬಳಿಕ ಮಾತನಾಡಿದ ಅವರು, ದೇಶವು ಸುಗಮವಾಗಿ ಮುನ್ನಡೆಯಬೇಕಾದರೆ ಪೂರಕವಾದ ಕಾನೂನು ಚೌಕಟ್ಟು ಅಗತ್ಯ. ಸುಗಮ ಆಡಳಿತಕ್ಕೆ ಕಾನೂನು ವ್ಯವಸ್ಥಿತ ಸಂವಿಧಾನವನ್ನು ರಚಿಸುವಲ್ಲಿ ಡಾ. ಬಿಆರ್ ಅಂಬೇಡ್ಕರ್ ರವರು ಪ್ರಧಾನ ಪಾತ್ರ ವಹಿಸಿದ್ದರು ಎಂದರು.

ಶಾಲಾ ಸಂಚಾಲಕ ಎ.ವಿ. ನಾರಾಯಣ ಅವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಉನ್ನತ ವ್ಯಾಸಂಗವನ್ನು ಪಡೆದು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದರು. ಎಲ್ಲದಕ್ಕೂ ಶಿಕ್ಷಣವೇ ಸೂಕ್ತವಾದ ಮಾರ್ಗ ಎಂಬುದನ್ನು ಮನಗಂಡು ಮುಂದೆ ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದರು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕ ಅಮರನಾಥ ಬಿ.ಪಿ. , ನೃತ್ಯ ಶಿಕ್ಷಕಿ ಶ್ರೀಮತಿ ನಿಖಿತಾ ಪಾಣಾಜೆ ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕುಮಾರಿ ಆಯಿಶಾ ಶೈಮಾಳ ಹುಟ್ಟುಹಬ್ಬವನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು .

ಶಿಕ್ಷಕಿ ಹರ್ಷಿತ ಪ್ರಾರ್ಥಿಸಿದರು. ಸುಚಿತಾ ಸ್ವಾಗತಿಸಿ, ವಿದ್ಯಾರ್ಥಿ ಮಾಸ್ಟರ್ ವಿಖ್ಯಾತ್ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಉಳಿದ ವಿದ್ಯಾರ್ಥಿಗಳು ಪುನರುಚ್ಚರಿಸಿದರು.ಅನುರಾಧ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ವೇತ ವಂದನಾರ್ಪಣೆಗೈದರು.

























