ರೀಲ್ಸ್ ಗೀಳಿನಿಂದಾಗಿ ಸಂಭವಿಸಿದ ಭೀಕರ ದುರಂತ
ಹೈದರಾಬಾದ್: ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿದ್ದ ಮೂವರು ಯುವತಿಯರು ಕ್ಯಾಮೆರಾ ಮುಂದೆಯೇ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ದುರಂತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೃತರನ್ನು 17 ವರ್ಷದ ತ್ರಿಶಾ, 16 ವರ್ಷದ ರತ್ನ ಕುಮಾರಿ ಮತ್ತು 16 ವರ್ಷದ ಪವಿತ್ರಾ 16 ಎಂದು ಗುರುತಿಸಲಾಗಿದೆ. ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮುಲ್ಲುಂಗುಮ್ಮಿ ಜಲಪಾತದಲ್ಲಿ ವಿಡಿಯೋ ಮಾಡಲು ಹೋದ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇತರ ಇಬ್ಬರು ಹುಡುಗಿಯರು ಸುರಕ್ಷಿತವಾಗಿ ಪಾರಾಗಿದ್ದಾರೆ.
ಆರಂಭದಲ್ಲಿ ನೀರಿನ ದಡದಲ್ಲೇ ಇದ್ದ ಯುವತಿಯರು ನೋಡ ನೋಡುತ್ತಲೇ ಮುಂದಕ್ಕೆ ಹೋಗಿದ್ದಾರೆ. ಈ ವೇಳೆ ಆಳ ಹೆಚ್ಚಾಗಿದ್ದು, ಮೊದಲು ಇಬ್ಬರು ಯುವತಿಯರು ಮುಳುಗಿದ್ದಾರೆ. ಬಳಿಕ ಹೊರಬರಲಾಗದೆ ಮೂವರು ಸಾವನ್ನಪ್ಪಿದ್ದಾರೆ.

























