ಬೆಂಗಳೂರಿನಲ್ಲಿ ‘ಝೋಂಬಿ ಡ್ರಗ್ಸ್’ ಮಾರಾಟದ ಸಂದೇಹ: ನಿಂತಲ್ಲೇ ‌ತೂರಾಡಿದ ಯುವಕನ ವಿಡಿಯೋ ವೈರಲ್

ಬೆಂಗಳೂರು: ಝೋಂಬಿ ‌ಡ್ರಗ್ಸ್ ಹೆಸರಿನ ಮಾದಕ ದ್ರವ್ಯ ನಗರದಲ್ಲಿ ಮಾರಾಟವಾಗುತ್ತಿರುವ ಸಂದೇಹ ವ್ಯಕ್ತವಾಗಿದ್ದು, ಕೆಲ ಯುವಕರು ಆ ಡ್ರಗ್ಸ್ ಸೇವಿಸಿ‌ ಅಮಲಿನಲ್ಲಿ ನಿಂತಲ್ಲೇ ‌ತೂರಾಟ‌ ನಡೆಸುತ್ತಿದ್ದಾರಾ? ಎಂಬ ಶಂಕೆ ಆರಂಭವಾಗಿದೆ.

ಬೆಂಗಳೂರಿನಲ್ಲಿ ಯುವಕನೊಬ್ಬ ಇತ್ತೀಚೆಗೆ ನಿಂತಲ್ಲೇ ಗಂಟೆಗಟ್ಟಲೆ ತೂರಾಡಿದ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಹ ವೈರಲ್ ಆಗಿದೆ. ಪೊಲೀಸರು ಸಹ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾಗಿ ತಿಳಿದು ಬಂದಿದೆ. ಈ‌ ಸ್ಥಿತಿಯಲ್ಲಿ ಕಂಡುಬಂದ ಯುವಕನ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.

ಚಲನ ರಹಿತ, ಟ್ರಾನ್ಸ್ ತರಹದ ಸೋಮಾರಿಗಳನ್ನಾಗಿ ಮಾಡುವ ಡ್ರಗ್ಸ್ ಇದಾಗಿದ್ದು, ಇಂತಹ ಮದ್ದನ್ನು ಪ್ರಾಣಿಗಳಿಗೆ ಅರಿವಳಿಕೆ ರೂಪದಲ್ಲಿ ನೀಡಲಾಗುತ್ತದೆ.























































 
 

error: Content is protected !!
Scroll to Top