ಕೆಲಸಕ್ಕೆಂದ್ದು ಹೊರಟು ಹೋದ ಯುವತಿ ನಾಪತ್ತೆ

ಬಂಟ್ವಾಳ: ಕೆಲಸಕ್ಕೆಂದು ತೆರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಅರಳ ಗ್ರಾಮದ ಮುಲಾರಪಟ್ಟದಲ್ಲಿ ನಡೆದಿದೆ. ಮುಲ್ಲಾರಪಟ್ಟ ಆಝಾದ್ ನಗರದನಿವಾಸಿ ಅಬ್ದುಲ್ ರಶೀದ್‌ರವರ ಪುತ್ರಿ ಫಾತಿಮತ್ ಇಪ್ರಾ (18) ನಾಪತ್ತೆಯಾದ ಯುವತಿ.

ಪಿಯುಸಿ ಮುಗಿಸಿ ಕಂಪ್ಯೂಟರ್ ತರಬೇತಿ ಪಡೆದಿದ್ದು, ಬಿ.ಸಿ.ರೋಡ್ ನ ಸೈಬರ್ ಸೆಂಟರ್ ನಲ್ಲಿ ಕೆಲಸ ಮಾಡಿತ್ತಿದ್ದರು. ಎಂದಿನಂತೆ ಮಾ.24ರಂದು ಕೆಲಸಕ್ಕೆಂದು ತೆರಳಿದ ಫಾತಿವiತ್ ಇಪ್ರಾ ಸಂಜೆಯಾದರು ಮನೆಗೆ ಬಾರದಿರುವುದನ್ನು ಕಂಡು ಗಾಬರಿಗೊಂಡ ಪೋಷಕರು ಆಕೆ ಕೆಲಸ ಮಾಡುವ ಸೈಬರ್ ಸೆಂಟರ್ ನ ಮಾಲೀಕ ಮನ್ನೂರ್ ಅವರ ಬಳಿ ವಿಚಾರಿಸಿದಾಗ ” ಆಕೆ ಅಂದು ಕೆಲಸಕ್ಕೆ ಬಂದಿಲ್ಲ” ಎಂಬ ಮಾಹಿತಿ ನೀಡುತ್ತಾರೆ.

ಬಂಧು ಮಿತ್ರರ ಮನೆ ಹಾಗೂ ಇತರ ಕಡೆಗಳಲ್ಲಿ ವಿಚಾರಿಸಿದಾಗ ಯುವತಿಯ ಸುಳಿವು ದೊರೆತಿಲ್ಲ.ಯುವತಿಯ ತಾಯಿ ರಝೀಯಾರವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























































 
 

error: Content is protected !!
Scroll to Top