ಧಾರವಾಡ: ಜಯ ನಗರದ 4 ನೇ ಕ್ರಾಸ್‌ನಲ್ಲಿ ಕೌಟುಂಬಿಕ ಕಲಹದ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯೆ ಸರೋಜಾ ಪಾಟೀಲ ಎಂಬವರ ಪುತ್ರಿ ಸವಿತಾ ಹೊಂಗಲಮಠ ಎಂಬವರೇ ಮೃತ ದುರ್ದೈವಿ.
ಸವಿತಾ ಅವರು ಪತಿಯ ಮನೆಯಲ್ಲೇ ನೇಣಿಗೆ ಶರಣಾಗಿರುವುದಾಗಿದೆ. ಆದರೆ ಸವಿತಾ ಮನೆಯವರು ಇದು ಕೊಲೆ, ಆತ್ಮಹತ್ಯೆ ಅಲ್ಲ ಎಂಬುದಾಗಿ ಆರೋಪಿಸಿದ್ದಾರೆ. ಸವಿತಾ ಅವರಿಗೆ ಪತಿ ಮನೆಯಲ್ಲಿ ಸಾಕಷ್ಟು ಕಿರುಕುಳ ನೀಡಲಾಗುತ್ತಿತ್ತು. ಆಕೆಯ ಪತಿಯೇ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಈ ಹಿಂದೆಯೂ ಆಕೆಯನ್ನು ಕೊಲೆ ಮಾಡುವ ಸಲುವಾಗಿ ನಿದ್ರೆ ಮಾತ್ರೆಗಳನ್ನು ಪತಿಯ ಮನೆಯವರು ನೀಡಿದ್ದಾಗಿಯೂ ಆರೋಪಿಸಲಾಗಿದೆ.
ಈ ಬಾರಿ ನೇಣು ಹಾಕಿ ಆಕೆಯನ್ನು ಕೊಲೆ ಮಾಡಲಾಗಿದೆ. ಸವಿತಾ ಅವರಿಗೆ ಮದುವೆಯಾಗಿ 25 ವರ್ಷಗಳಾಗಿದ್ದು, ವಿವಾಹವಾದಾಗಿನಿಂದಲೂ ಅವರಿಗೆ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂದು ಸವಿತಾ ಹೆತ್ತವರು ಆರೋಪಿಸಿರುವುದಾಗಿದೆ.
ಸವಿತಾ ಪತಿ ಬಸವರಾಜ ಹೊಂಗಲಮಠ ಸೇರಿದಂತೆ ಅವರ ಕುಟುಂಬದವರ ಮೇಲೆ ಸವಿತಾ ಕುಟುಂಬಸ್ಥರು ಕೊಲೆ ಆರೋಪ ಹೊರಿಸಿ, ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

























