ಲಸಿಕೆ ಭಯ: ರೇಬಿಸ್‌ಗೆ ಬಲಿಯಾಯ್ತ ಮುಗ್ಧ ಮಗುವಿನ ಜೀವ

ಮುಂಬೈ: ಚುಚ್ಚುಮದ್ದಿನ ಭಯಕ್ಕೆ ರೇಬಿಸ್ ಲಸಿಕೆಯನ್ನು ಪಡೆಯದೇ 9 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮಹಾರಾಷ್ಟ್ರದ ಮುಂಬೈ‌ನಲ್ಲಿ ನಡೆದಿದೆ.

ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಕಶಿಷ್ ಸಹಾನಿ ಎಂಬ ಬಾಲಕಿಯೇ ‌ಮೃತ ದುರ್ದೈವಿ.

ಕಶಿಷ್ ಸುಮಾರು ಆರು ತಿಂಗಳ ಹಿಂದೆ ತನ್ನ ತಾತನ ಜೊತೆ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಯೊಂದು ಆಕೆಯನ್ನು ಪರಚಿತ್ತು. ತಕ್ಷಣವೇ ಮನೆಯವರು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಇಂಜೆಕ್ಷನ್ ಭಯ ಹೊಂದಿದ್ದ ಅವಳು ಲಸಿಕೆ ಪಡೆಯದಿರಲು ಹಠ ಮಾಡಿದ್ದಳು.























































 
 

ಗಾಯ ಚಿಕ್ಕದಾಗಿದ್ದು, ಕ್ರಮೇಣ ವಾಸಿಯಾದಂತೆ ಕಂಡು ಬಂದಿತ್ತು. ಆದ್ದರಿಂದ ಕುಟುಂಬ ಸದಸ್ಯರು ಸಹ ಲಸಿಕೆ ಪಡೆಯುವಂತೆ ಆಕೆಗೆ ಹೆಚ್ಚು ಒತ್ತಡ ಹೇರಿಲ್ಲ. ಆದರೆ ಆರು ತಿಂಗಳ ಬಳಿಕ ದುರದೃಷ್ಟವಶಾತ್ ಆಕೆಯ ಆರೋಗ್ಯ ಹದಗೆಟ್ಟಿತ್ತು. ಆಹಾರ, ನೀರು ಸೇವನೆಯನ್ನು ಸಹ ತ್ಯಜಿಸಿದ್ದಳು. ಅವಳ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರೇಬಿಸ್ ಉಲ್ಬಣಗೊಂಡಿದ್ದರಿಂದಾಗಿ ಚಿಕಿತ್ಸೆ ಫಲಿಸದೆ ಅವಳು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

error: Content is protected !!
Scroll to Top