ಶಿರ್ವ: ಗಂಡನ ಜೊತೆಗೆ ಊಟದ ವಿಷಯದಲ್ಲಿ ಜಗಳವಾಗಿದ್ದು, ಹೆಂಡತಿ ತನ್ನ ಅಪ್ರಾಪ್ತ ಪುತ್ರಿಯನ್ನು ಕರೆದುಕೊಂಡು ನಾಪತ್ತೆಯಾಗಿರುವ ಘಟನೆ ಬೆಳಪು ಗ್ರಾಮದ ಪುಂಚಲಕಾಡಿನಲ್ಲಿ ನಡೆದಿದೆ.
ರೇಣುಕಾ ಗಂಗಾಧರ್ ಪೂಜೇರ್ (28) ಮತ್ತು ಪ್ರತೀಕ್ಷಾ ಗಂಗಾಧರ್ ಪೂಜೇರ್(11) ಎಂಬವರೇ ನಾಪತ್ತೆಯಾದವರು.
ಗಂಡ ಮತ್ತು ಹೆಂಡತಿಯ ನಡುವೆ ಮಾ. 20 ರಂದು ಊಟದ ವಿಷಯದಲ್ಲಿ ಗಲಾಟೆ ನಡೆದಿತ್ತು. ಬಳಿಕ ಕೆಲಸದ ಕಾರಣಕ್ಕೆ ಅಂಗಡಿಗೆ ಹೋಗುವುದಾಗಿ ಹೇಳಿ ಗಂಡ ಮನೆಯಿಂದ ತೆರಳಿದ್ದಾರೆ. ಕೆಲಸ ಮುಗಿಸಿ ಗಂಡ ರಾತ್ರಿ ವೇಳೆ ಮನೆಗೆ ಬಂದಿದ್ದು, ಆಗ ಮನೆಯ ಬಾಗಿಲು ಹಾಕಿತ್ತು. ರೇಣುಕಾ ಅವರು ಮೊಬೈಲ್ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಮಗಳ ಜೊತೆ ಮನೆ ಬಿಟ್ಟು ಹೋಗಿರುವುದಾಗಿದೆ.
ಪತಿ ನೀಡಿದ ದೂರಿನಂತೆ ಶಿರ್ವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

























