ಸುಳ್ಯ: ನಿಯಂತ್ರಣ ತಪ್ಪಿ ಬೈಕೊಂದು ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಸವಾರ ಮೃತಪಟ್ಟ ಘಟನೆ ನಿಂತಿಕಲ್ಲಿನ ಕೆನರಾ ಬ್ಯಾಂಕ್ ಹತ್ತಿರ ನಡೆದಿದೆ.
ಮೆಸ್ಕಾಂ ಗುತ್ತಿಗೆ ನೌಕರ ಲೋಕನಾಥ್ ಎಂಬವರೇ ಮೃತ ದುರ್ದೈವಿ. ಸುಳ್ಯದಿಂದ ತಮ್ಮ ಮನೆಯತ್ತ ಮರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾದರೂ, ಗಾಯದ ತೀವ್ರತೆ ಹೆಚ್ಚಾಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

























