ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಪ್ರಕರಣ ಸಿಐಡಿಗೆ ವರ್ಗಾವಣೆ

ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಆದೇಶಿಸಿದ ಸರ್ಕಾರ

ಮಂಗಳೂರು : ಮೂಡುಬಿದಿರೆಯ ಅಮಾನತಿನಲ್ಲಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂದೇಶ್‌ಪಿ.ಜಿ.ಯ ಹೊಸ ಹೊಸ ಪ್ರಕರಣಗಳು ಬಯಲಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಸೋಮವಾರ ಆದೇಶ ಹೊರಡಿಸಿದೆ. ಸರ್ಕಾರ ಆದೇಶ ಹೊರಬಿದ್ದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ.

2018ರಲ್ಲಿ ವೇಣೂರು ಠಾಣೆಯಲ್ಲಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಕ್ಕನ ವಿರುದ್ಧ ತಂಗಿ ದೂರು ನೀಡಿದ್ದರು. ಆ ಮಹಿಳೆ ಮತ್ತು ಆತನ ಪತಿ ವಿರುದ್ಧ ದೂರು ದಾಖಲಾಗಿತ್ತು. ಅದೇ ವೇಳೆ ಸರ್ಕಲ್ ಇನ್ಸ್​ಪೆಕ್ಟರ್​​ ಆಗಿದ್ದ ಸಂದೇಶ್ ಈ ಕೇಸ್ ವಿಚಾರವಾಗಿ ಬ್ಲ್ಯಾಕ್‌ಮೇಲ್ ಮಾಡಿ ನಿರಂತರ ಅತ್ಯಾಚಾರ ಮಾಡಿದ್ದಾಗಿ ಆ ಮಹಿಳೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿತ್ತು.























































 
 

ಮುಖ್ಯ ಶಿಕ್ಷಕಿಯಾಗಿರುವ ಸಂತ್ರಸ್ತೆ ತನ್ನ ದೂರಿನಲ್ಲಿ ಸಾಕಷ್ಟು ಆರೋಪ ಮಾಡಿದ್ದರು. ಕೇಸ್ ವಿಚಾರದಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಾ 2020ರಿಂದ 2023ರವರೆಗೂ ನಿರಂತರವಾಗಿ ಅತ್ಯಾಚಾರ ಮಾಡಿದ್ದಾಗಿ ಆರೋಪಿಸಿದ್ದರು. ಕೆಲ ಸಮಯದ ಬಳಿಕ ಪ್ರತಿರೋಧ ಒಡ್ಡಿದ್ದಕ್ಕೆ ಕೇಸ್ ರಿ ಓಪನ್ ಮಾಡುವುದಾಗಿ ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದರು.

ಸಂದೇಶ್ ಸೇರಿ ಒಟ್ಟು 4 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಸಂದೇಶ್ ಖಾಸಗಿ ಚಾಲಕ ಅಕ್ಬರ್, ಸ್ಮಿತಾ ಮತ್ತು ಸುನೀತಾ ಲೋಬೊ ಎಂಬುವವರ ಮೇಲೆ ದೂರು ದಾಖಲಾಗಿತ್ತು. ಸಂದೇಶ್ ಅತ್ಯಾಚಾರ ಮಾಡಿದ್ದಲ್ಲದೆ 13 ಲಕ್ಷ ರೂ ನಗದು, 3.62 ಲಕ್ಷ ರೂ ಹಣ ಲಪಟಾಯಿಸಿದ್ದಾನಂತೆ. ಚಿನ್ನವನ್ನು ಲಪಟಾಯಿಸಿ ಅಕ್ಬರ್ ಹೆಸರಿನಲ್ಲಿ ಫೆಡರಲ್ ಬ್ಯಾಂಕ್​ನಲ್ಲಿ ಅಡವಿಟ್ಟಿದ್ದ.

ಹೊಸ ಮನೆ ಕಟ್ಟುವಾಗ ಸಂತ್ರಸ್ತೆ ತೋಟದಿಂದ 2.5 ಲಕ್ಷ ರೂ ಮೌಲ್ಯದ ಸಾಗುವಾನಿ ಮರವನ್ನು ಸಾಗಿಸಿದ್ದ. ಈತನ ಕರ್ಮಕಾಂಡ ಬಯಲಾಗುತ್ತಿದ್ದಂತೆ ಸ್ಮಿತಾ ಮತ್ತು ಸುನಿತಾ ಲೋಬೊರನ್ನು ಸಂತ್ರಸ್ತೆ ಮನೆಗೆ ಕಳುಹಿಸಿ ನಡೆದ ವಿಚಾರ ಹೊರಗಡೆ ಬಾಯಿಬಿಟ್ಟರೆ ಕೇಸ್ ಹಾಕುತ್ತೇನೆ. ಜೀವಂತವಾಗಿ ಬಿಡೋದಿಲ್ಲ ಅಂತಾ ಬೆದರಿಕೆ ಕೂಡ ಹಾಕಿದ್ದ ಎಂದು ಆರೋಪಿಸಲಾಗಿತ್ತು.

error: Content is protected !!
Scroll to Top