ಶಾಮನೂರು ಮೊಮ್ಮಗ ದಾವಣಗೆರೆ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ

ಮುಸ್ಲಿಮರ ಬೇಡಿಕೆಗೆ ಸಿಗದ ಮನ್ನಣೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಹೈಕಮಾಂಡ್​​ಗೆ ದೊಡ್ಡ ತಲೆನೋವಾಗಿದ್ದ ದಾವಣಗೆರೆ ದಕ್ಷಿಣ ಟಿಕೆಟ್​​ ಗೊಂದಲ ಕೊನೆಗೂ ಬಗೆಹರಿದಿದೆ. ಶಾಮನೂರ ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರ್​​​​​ಗೆ ಕಾಂಗ್ರೆಸ್ ಹೈಕಮಾಂಡ್​​ ಟಿಕೆಟ್ ಘೋಷಣೆ ಮಾಡಿದೆ. ಆ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​ ಮತ್ತೆ ಶಾಮನೂರ ಕುಟುಂಬದ ಪಾಲಾಗಿದೆ.

ದಾವಣಗೆರೆ ಟಿಕೆಟ್‌ಗಾಗಿ ಮುಸ್ಲಿಮ್‌ ಸಮುದಾಯದವರು ಪಟ್ಟುಹಿಡಿದಿದ್ದರು. ಸಚಿವ ಜಮೀರ್‌ ಅಹ್ಮದ್‌ಖಾನ್‌ ಅಖಾಡಕ್ಕಿಳಿದು ಟಿಕೆಟ್‌ ಮುಸ್ಲಿಮರಿಗೆ ಟಿಕೆಟ್‌ ಕೊಡದಿದ್ದರೆ ರಾಜೀನಾಮೆ ನೀಡುವ ಧಮಕಿ ಹಾಕಿದ್ದರು. ಆದರೆ ಕಾಂಗ್ರೆಸ್‌ ಹೈಕಮಾಂಡ್‌ ಮುಸ್ಲಿಮ್‌ ಸಮುದಾಯದ ಬೇಡಿಕೆಗೆ ಯಾವುದೇ ಮನ್ನಣೆ ನೀಡಿಲ್ಲ.























































 
 

ಸತತ ಆರು ಸಲ ಶಾಸಕರಾಗಿದ್ದ ಶಾಮನೂರ ಶಿವಶಂಕರಪ್ಪ ನಿಧನದಿಂದ ಕ್ಷೇತ್ರ ತೆರವಾಗಿತ್ತು. ಸಚಿವ ಜಮೀರ್‌ ಅಹ್ಮದ್ ಖಾನ್ ಸೇರಿದಂತೆ ಪ್ರಮುಖ ಅಲ್ಪಸಂಖ್ಯಾತರಿಗೆ ಟಿಕೆಟ್​ಗೆ ಪಟ್ಟು ಬೆನ್ನಲ್ಲೇ ಇದೀಗ ಶಾಮನೂರು ಕುಟುಂಬಕ್ಕೆ ಟಿಕೆಟ್​​ ಒಲಿದಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​ ಮತ್ತು ಸುರ್ಜೇವಾಲ ಸೇರಿದಂತೆ ನಾಯಕರೊಂದಿಗೆ ನಡೆದ ಸುದೀರ್ಘ ಸಂಧಾನ ಯಶಸ್ವಿಯಾಗಿದೆ. ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಸಚಿವ ಜಮೀರ್ ಅಹ್ಮದ್ ಸೇರಿ ಹಲವು ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.

ಟಿಕೆಟ್​ ಗದ್ದಲದ ಹಿನ್ನೆಲೆ ಸಚಿವ ಎಸ್.​ಎಸ್ ಮಲ್ಲಿಕಾರ್ಜುನ್​ ದಿಢೀರ್ ಬೆಂಗಳೂರಿಗೆ ತೆರಳಿದ್ದರು. ಕೊನೆಗೂ ತಂದೆ ಶಾಮನೂರ ಶಿವಶಂಕರಪ್ಪ ರೀತಿಯಲ್ಲಿ ಪುತ್ರ ಸಮರ್ಥ್​ ಶಾಮನೂರಗೆ ಟಿಕೆಟ್ ಕೊಡಿಸುವಲ್ಲಿ ಸಚಿವ ಮಲ್ಲಿಕಾರ್ಜುನ್​ ಯಶಸ್ವಿ ಆಗಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನಿಂದ ಸಮರ್ಥ್​​ ಶಾಮನೂರು ಮಲ್ಲಿಕಾರ್ಜುನ್ ಅವರಿಗೆ ಬಿ ಫಾರಂ ನೀಡಲಾಗಿದೆ. ಮಾರ್ಚ್ 23ರಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಸಮುದಾಯಕ್ಕೆ ಟಿಕೆಟ್​​ ಕೊಡಬೇಕು ಎಂದು ಮುಸ್ಲಿಂ ಸಮುದಾಯದ ನಾಯಕರು ಆಗ್ರಹಿಸಿದ್ದರು. ಬಾಗಲಕೋಟೆಯಲ್ಲಿ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡುವುದಾದರೆ ದಾವಣಗೆರೆಯಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಬೇಕು ಅನ್ನೋದು ಶಾಮನೂರು ಕುಟುಂಬ ಮತ್ತು ಬೆಂಬಲಿಗರ ವಾದವಾಗಿತ್ತು. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​ ಕಗ್ಗಂಟಾಗಿತ್ತು.

ಟಿಕೆಟ್ ಘೋಷಣೆಗೂ ಮುನ್ನವೇ ಶುಕ್ರವಾರ ಸಮರ್ಥ್ ಶಾಮನೂರ್​​ ನಾಮಪತ್ರ ಸಲ್ಲಿಸಿದ್ದರು. ದಾವಣಗೆರೆಯ ನಿಟುವಳ್ಳಿ ದುರ್ಗಾಂಬಿಕಾ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಪೂಜೆ ಬಳಿಕ ಪ್ರಮುಖರನ್ನ ಭೇಟಿ ಮಾಡಿದ್ದರು.

error: Content is protected !!
Scroll to Top