ಗೇರುಕಟ್ಟೆ ಶ್ರೀ ಪತಂಜಲಿ ಯೋಗ ಶಾಖೆಯಲ್ಲಿ ವೈಕುಂಠ ಏಕಾದಶಿ ಆಚರಣೆ

ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ಇದರ ಕಳಿಯ ಗೇರುಕಟ್ಟೆ ಕ್ಷೀರಸಂಗಮ ಶಾಖೆಯಲ್ಲಿ ವೈಕುಂಠ ಏಕಾದಶಿಯ ಆಚರಣೆಯನ್ನು ಭಜನೆ, ವಿಷ್ಣು ನಾಮ ಸಂಕೀರ್ತನೆ ಮತ್ತು ವಿಷ್ಣು ನಮಸ್ಕಾರದ ಮೂಲಕ ಆಚರಿಸಲಾಯಿತು.

ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ, ಭಗವತ್ ಪ್ರೀತಿ ಮತ್ತು ಭಗವತ್ ಪ್ರಾಪ್ತಿಗಾಗಿ ಮಾಡುವ ಸತ್ಕರ್ಮಗಳಿಂದ ಪಡೆಯುವ ಪುಣ್ಯ ವಿಶೇಷದಿಂದ ಭಗವಂತನ ಸಾನಿಧ್ಯವನ್ನು ಪಡೆಯಬಹುದು. ಸಮರ್ಪಣ ಭಾವದಿಂದ ಮಾಡುವ ಕರ್ಮಾಚರಣೆಯಿಂದ ಜ್ಞಾನವನ್ನು ಪಡೆದು ಸಾಂಸಾರಿಕ ಬಂಧನದಿಂದ ಬಿಡುಗಡೆ ಹೊಂದಿ ಮೋಕ್ಷವನ್ನು ಪಡೆಯಲು ವೈಕುಂಠ ಏಕಾದಶಿ ವ್ರತವನ್ನು ತ್ರಿಕರಣ ಶುದ್ದಿಯಿಂದ ಮಾಡಬೇಕೆಂದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆಯೆಂದು ತಿಳಿಸಿದರು.

ವೈಕುಂಠ ಏಕಾದಶಿಯ ಬಗ್ಗೆ ಬೌದ್ಧಿಕ ನೀಡಿದ ಅವರು ಏಕಾದಶಿ ದೇವಿ, ಪುತ್ರದಾ ಏಕಾದಶಿ,ಮುಕ್ಕೋಟಿ ದ್ವಾದಶಿ ಬಗ್ಗೆ ತಿಳಿಸಿ ಕಡ್ಡಾಯವಾಗಿ ಮಾಡುವ ಉಪವಾಸದಿಂದ ದೈಹಿಕ ಮತ್ತು ಮಾನಸಿಕ ಅರೋಗ್ಯ ವೃದ್ಧಿಯಾಗುವುದೆಂದರು.





















































 
 

ಯೋಗ ಬಂಧುಗಳಾದ ವಿಜಯ ಅಶೋಕ, ಶಿವಣ್ಣ, ಭಾರತಿ ಪದ್ಮಲತಾ ಮೊದಲಾದವರು ಭಾಗವಹಿಸಿದ್ದರು. ಪ್ರತಿದಿನದ ಯೋಗಭ್ಯಾಸ ಚಟುವಟಿಕೆಗಳೊಂದಿಗೆ ಅಮೃತ ಫಲಹಾರವನ್ನು ನಡೆಸಲಾಯಿತು.

error: Content is protected !!
Scroll to Top