ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಕೆಂಪುಕೋಟೆ ಸಮೀಪ ಬ್ಲಾಸ್ಟ್ ಮಾಡಿದ ಸಂಚುಕೋರರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ತುಂಬಾ ಭಾರವಾದ ಹೃದಯದಿಂದ ನಾನಿಂದು ಇಲ್ಲಿಗೆ ಬಂದಿದ್ದೇನೆ. ನವದೆಹಲಿಯಲ್ಲಿ ನಿನ್ನೆ ಸಂಜೆ ನಡೆದ ಬ್ಲಾಸ್ಟ್ ಎಲ್ಲರನ್ನೂ ಶೋಕಸಾಗರಕ್ಕೆ ನೂಕಿದೆ. ಈ ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡವರ ನೋವು ನನಗೆ ಅರ್ಥವಾಗುತ್ತದೆ. ಆ ಸಂತ್ರಸ್ತರ ಜೊತೆಗೆ ಇಡೀ ದೇಶವೇ ಇರುವುದಾಗಿ ಅವರು ಸಾಂತ್ವನ ಹೇಳಿದ್ದಾರೆ.
ಈ ಪಿತೂರಿಯ ಆಳವನ್ನು ನಮ್ಮ ಸಂಸ್ಥೆಗಳು ಕಂಡುಹಿಡಿಯುತ್ತವೆ. ಈ ಸಂಚಿನ ಹಿಂದಿನ ಕೈಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
























