ವಂದೇ ಮಾತರಂ ವಿರೋಧಿಗಳು ಭಾರತ ಮಾತೆಯನ್ನು ವಿರೋಧಿಸಿದಂತೆ: ಯೋಗೀಜಿ

ಲಕ್ನೋ: ವಂದೇ ಮಾತರಂ ಗೀತೆಯ ವಿರೋಧಿಗಳು ಭಾರತ‌ ಮಾತೆಯನ್ನು ‌ವಿರೋಧಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಂದೇ ಮಾತರಂ ಎನ್ನುವುದು ಯಾವುದೇ ರೀತಿಯ ನಿರ್ಧಿಷ್ಟವಾದ ಪೂಜೆಗೆ ಸಂಬಂಧಿಸಿದ ವಿಷಯವಲ್ಲ. ಆ ಗೀತೆ ಭಾರತ ಮಾತೆಯ ಮೇಲಿನ ಪ್ರೀತಿಯನ್ನು ತೋರ್ಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ವಂದೇ ಮಾತರಂ ಯಾವುದೇ ವ್ಯಕ್ತಿ, ಜಾತಿ, ಪ್ರದೇಶಕ್ಕೆ ಸೇರಿದ ವಿಷಯವಲ್ಲ. ಸರಸ್ವತಿ, ಲಕ್ಷ್ಮೀ, ದುರ್ಗಾ ದೇವಿ ಮೊದಲಾದವರನ್ನು ಪೂಜೆ ಮಾಡುವುದು ಈ ದೇಶದ ಶಕ್ತಿಯ ಸಂಕೇತವಾಗಿದೆ. ಆದ್ದರಿಂದ ವಂದೇ ಮಾತರಂ ಅನ್ನು ವಿರೋಧ ಮಾಡುವವರು ಭಾರತ ಮಾತೆ ಯನ್ನು ವಿರೋಧಿಸಿದಂತೆ ಎಂದು ಅವರು ಹೇಳಿರುವುದಾಗಿದೆ.





















































 
 
error: Content is protected !!
Scroll to Top