ತಿರುವನಂತಪುರಂ: ಕೇರಳದ ಸರ್ಕಾರಿ ಬಸ್ಸುಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಪ್ರಯಾಣ ಮಾಡುವ ಅವಕಾಶವನ್ನು ಕೇರಳ ಸರ್ಕಾರ ನೀಡಿದೆ.
ಈ ಬಗ್ಗೆ ಕೇರಳದ ಸಾರಿಗೆ ಸಚಿವ ಕೆ. ಬಿ. ಗಣೇಶ್ ಕುಮಾರ್ ಮಾತನಾಡಿದ್ದು, ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ರೋಗಿಗಳೂ ಕೇರಳದ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ತಿಳಿಸಿದ್ದಾರೆ.
ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯಲು ಆಗಾಗ್ಗೆ ತೆರಳಬೇಕಾಗಿದ್ದು, ಬಡ ರೋಗಿಗಳಿಗೆ ನೆರವಾಗುವ, ಆರ್ಥಿಕವಾಗಿ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಇಂತಹ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವಂತಹ ರೋಗಿಗಳಿಗೂ ಈ ಸೇವೆ ಅನ್ವಯವಾಗಲಿದೆ. ಚಿಕಿತ್ಸೆ ನೀಡುವ ವೈದ್ಯರ ಪ್ರಮಾಣಪತ್ರ ತೋರಿಸುವ ಮೂಲಕ ಈ ಸೇವೆಯ ಅನುಕೂಲತೆ ಪಡೆಯಬಹುದಾಗಿದೆ.
























