ಚಿನ್ನದ ಬೆಲೆ ದಿಢೀರ್‌ ಇಳಿಕೆ : ಒಂದೇ ದಿನದಲ್ಲಿ 1,600 ರೂ. ಕಡಿಮೆ

ನವದೆಹಲಿ: ಕೆಲ ದಿನಗಳಿಂದ ಭಾರಿ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ದರ ಇಂದು ದಿಢೀರ್‌ ಇಳಿಕೆಯಾಗಿದೆ. ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1,740 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 1,600 ರೂ. ಕಡಿಮೆಯಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 91,640 ರೂ. ಆಗಿದ್ದರೆ, 22 ಕ್ಯಾರಟ್ ಚಿನ್ನದ ಬೆಲೆ 84,000 ರೂ.ಗೆ ಇಳಿಕೆಯಾಗಿದೆ. ಗುರುವಾರ 10 ಗ್ರಾಂ 24 ಕ್ಯಾರೆಟ್ ಬೆಲೆ 93,380 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 85,600 ರೂ. ಆಗಿತ್ತು. ಬೆಳ್ಳಿಯ ಬೆಲೆ ಕೆಜಿಗೆ 4,000 ರೂ.ಗಳಷ್ಟು ಕಡಿಮೆಯಾಗಿದ್ದು 1 ಕೆಜಿ ಬೆಳ್ಳಿಗೆ 99,900 ರೂ. ದರವಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೆರಿಗೆ ಸಮರ ಆರಂಭಿಸಿದ ಬಳಿಕ ಹೂಡಿಕೆದಾರರಿಗೆ ಭಾರಿ ನಷ್ಟವಾಗುತ್ತಿದೆ. ಈ ನಷ್ಟವನ್ನು ಸರಿದೂಗಿಸಲು ಚಿನ್ನದ ಮೇಲೆ ಹೂಡಿಕೆ ಮಾಡಿರುವ ಹೂಡಿಕೆದಾರರು ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಹೀಗಾಗಿ ಚಿನ್ನದ ಬೆಲೆ ಇಳಿಕೆಯಾಗಿದೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳು, ಆಮದು ಸುಂಕಗಳು, ತೆರಿಗೆಗಳು ಮತ್ತು ವಿನಿಮಯ ದರಗಳಲ್ಲಿನ ಏರಿಳಿತಗಳು ಪ್ರಾಥಮಿಕವಾಗಿ ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ. ಈ ಅಂಶಗಳು ಒಟ್ಟಾಗಿ ದೇಶಾದ್ಯಂತ ದೈನಂದಿನ ಚಿನ್ನದ ದರಗಳನ್ನು ನಿರ್ಧರಿಸುತ್ತವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top