ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ಐಟಿ ಫೆಸ್ಟ್‌ “ಪಿನ್ಯಾಕಲ್‌” ಗೆ ಚಾಲನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗ ಮತ್ತು ಪಿನ್ಯಾಕಲ್‌ ಐಟಿಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಐಟಿ ಫೆಸ್ಟ್‌ ಪಿನ್ಯಾಕಲ್‌-25 ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಸೋಷಿಯಲ್‌ ಮೀಡಿಯಾ ಇನ್‌ ಪ್ಲುಎನ್ಸರ್‌ ಹಾಗೂ ತುಳು ಕಂಟೆಂಟ್‌ ಕ್ರಿಯೇಟರ್‌ ಶರಣ್‌ ಚಿಲಿಂಬಿ ದೀಪ ಬೆಳಗಿಸುವುದರ ಮೂಲಕ ಐಟಿ ಫೆಸ್ಟ್‌ ನ್ನು ಉದ್ಘಾಟಿಸಿ ಮಾತನಾಡಿ, “ಪಾಠಗಳಿಂದ ಮಾತ್ರವಲ್ಲದೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಬಹಳಷ್ಟು ಕಲಿಯಲು ಸಾಧ್ಯವಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಹೆಚ್ಚು ಮುಖ್ಯ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಜನರು ಇತರರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲಕರ ವಾತಾವರಣವಿದೆ. ನನಗೆ ಈ ಕಾಲೇಜಿನ ಆವರಣವನ್ನು ಪ್ರವೇಶಿಸುತ್ತಿರುವಂತೆಯೇ ಸಕಾರಾತ್ಮಕ ಭಾವನೆ ಬರುತ್ತಿದೆ ಎಂದು ಹೇಳಿದರು.

ಅತಿಥಿಯಾಗಿ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಮಾತನಾಡಿ, ವಿದ್ಯಾರ್ಥಿಗಳು ಸೃಜನಶೀಲರಾಗಿರಲು ಕಲಿಯಬೇಕು. ಇತರರನ್ನು ಅನುಕರಿಸುವವರು ಹಲವರಿರಬಹುದು. ಆದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸಬೇಕೆಂದಲ್ಲಿ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟರು.





















































 
 

ಕಾಲೇಜಿನ ಸಂಚಾಲಕ ಅತಿ ವಂ. ಲಾರೆನ್ಸ್‌ ಮಸ್ಕರೇನಸ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರಿ. ತರಗತಿಯೊಳಗೆ ಕಲಿಯುವುದು ಮತ್ತು ಈ ರೀತಿಯ ಸ್ಪರ್ಧೆಗಳಿಂದ ಕಲಿಯುವುದು ಸಿದ್ಧಾಂತ ಮತ್ತು ಪ್ರಾಯೋಗಿಕತೆಯಂತೆ. ಜೀವನದಲ್ಲಿ ಯಶಸ್ವಿಯಾಗಲು ಎರಡೂ ಮುಖ್ಯ. ಜ್ಞಾನ ಮತ್ತು ಅನುಭವವಿಲ್ಲದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸುವುದು ಕಷ್ಟಕರವಾಗಿರುತ್ತದೆ. ಓದಿನ ಜೊತೆಗೆ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮನ್ನು ಮುಕ್ತವಾಗಿರಿಸಿಕೊಳ್ಳಿ. ಜೀವನದಲ್ಲಿ  ಕಲಿಕೆ ಹಾಗೂ ಸ್ಪರ್ಧೆಗಳಿಗೆ ಸಮಾನವಾದ ಪ್ರಾಮುಖ್ಯತೆ ನೀಡಿ. ವಿನಮ್ರತೆಯು ನಮ್ಮ ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ  ಬಿ ಸಿ ಎ ಪದವಿ ವಿಭಾಗದಲ್ಲಿ ನಾಲ್ಕನೇ ರ್ಯಾಂಕ್‍ ಡೆದ ಚೈತಾಲಿ ಎಸ್‌.  ಅವರನ್ನು ಸನ್ಮಾನಿಸಲಾಯಿತು. ಗಣಕವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸೌಮ್ಯ ಸನ್ಮಾನ ಭಾಷಣ ಮಾಡಿದರು.

ಸುರಭಿ ಮತ್ತು ಬಳಗ ಪ್ರಾರ್ಥಿಸಿದರು. ಪಿನ್ಯಾಕಲ್‌-25ರ ವಿದ್ಯಾರ್ಥಿ ಸಂಯೋಜಕ ಲೆನಿನ್‌ ಸ್ವಾಗತಿಸಿದರು. ಪಿನ್ಯಾಕಲ್‌-25 ವಿದ್ಯಾರ್ಥಿ ಸಂಯೋಜಕ ಹವ್ಯಾಸ್‌ ಯು ವಂದಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಸೃಜನಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವರೂ ಗಣಕವಿಜ್ಞಾನ ವಿಭಾಗದ ಡೀನ್‌ ಹಾಗೂ ಮುಖ್ಯಸ್ಥರಾದ ಡಾ| ವಿನಯಚಂದ್ರ ಹಾಗೂ ಪಿನ್ಯಾಕಲ್‌-25ರ ಸಂಯೋಜಕಿ ಡಾ| ಗೀತಾ ಪೂರ್ಣಿಮಾ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top