ಅಕ್ರಮ ಗೋಸಾಗಾಟ ಮಾಡುತ್ತಿದ್ದ ವಾಹನಕ್ಕೆ ಹಿಂದು ಸಂಘಟನೆಯಿಂದ ತಡೆ

ಬೆಳ್ತಂಗಡಿ: ಮಂಗಳೂರಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಕಳಿಯ ನ್ಯಾಯತರ್ಪು ಸಮೀಪದ ಜಾರಿಗೆಬೈಲು ಎಂಬಲ್ಲಿ ತಡೆಹಿಡಿದ ಘಟನೆ ನಡೆದಿದೆ.

ತರಕಾರಿ ಸಾಗಾಟದ ವಾಹನದಲ್ಲಿ ಸುಮಾರು 10 ರಿಂದ 15 ಗೋವುಗಳನ್ನು ವಧೆಗೆಂದು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆಹಿಡಿದಿದ್ದಾರೆ.

ಘಟನೆಯಲ್ಲಿ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದ. ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ವಾಹನ ಮತ್ತು 15 ಕ್ಕೂ ಹೆಚ್ಚು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top