ಮಾ.7 : ಪುತ್ತೂರು ಲಯನ್ಸ್ ಸೇವಾ ಸದನದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಆರಂಭ

ಪುತ್ತೂರು : ಕರ್ನಾಟಕ ಎಸ್ ಪಿವೈಎಸ್ ಎಸ್ ವತಿಯಿಂದ ಪುತ್ತೂರು ಲಯನ್ಸ್ ಸೇವಾ ಸದನ, ಲಯನ್ಸ್ ಕ್ಲಬ್ ಸಹಯೋಗದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯ ಉದ್ಘಾಟನಾ ಕಾರ್ಯಕ್ರಮ ಮಾ.7 ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಪುತ್ತೂರಿನ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ.

ಈ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯಲ್ಲಿ ಕೇಂದ್ರ ಸಮಿತಿಯಿಂದ ಶಿಕ್ಷಣ ಪಡೆದ ನುರಿತ ಶಿಕ್ಷಕಕರಿಂದ ಯೋಗಾಸನ, ಪ್ರಾಣಾಯಾಮ, ಧ್ಯಾನ, ಶರೀರ ಶುದ್ಧೀಕರಣ ಕ್ರಿಯೆ, ಅಗ್ನಿಹೋತ್ರ, ಅಕ್ಯುಪ್ರೆಶರ್ ಕ್ರಿಯೆಗಳು, ಸೂರ್ಯ ನಮಸ್ಕಾರ, ಯೋಗ ಚಿಕಿತ್ಸಾತ್ಮಕ ಕ್ರಿಯೆ, ಆಯುರ್ವೇದ ಆಹಾರ ಪದ್ಧತಿ, ಭಾಷಣ ಕಲೆ, ಭಜನೆ, ಸತ್ಸಂಗಗಳನ್ನು ಉಚಿತವಾಗಿ ಹೇಳಿಕೊಡಲಾಗುತ್ತದೆ.

ತರಗತಿಯಲ್ಲಿ 10 ವರ್ಷದಿಂದ ಮೇಲ್ಪಟ್ಟ ಎಲ್ಲಾ ವಯಸ್ಸಿನ ಪುರುಷರು, ಮಹಿಳೆಯರು ಪಾಲ್ಗೊಳ್ಳಬಹುದು. ಪಾಲ್ಗೊಳ್ಳುವವರಿಗೆ ಉದ್ವೇಗ, ಒತ್ತಡ, ಖಿನ್ನತೆ ಶಮನ, ಏಕಾಗ್ರತೆಗಾಗಿ, ನೆನಪಿನ ಶಕ್ತಿ ಚುರುಕಿಗೆ, ಸಂಧಿವಾತ ದೋಷ, ನಿದ್ರೆ ಸಮಸ್ಯೆ, ಆಸಿಡಿಟಿ, ಮೂಲವ್ಯಾದಿ, ರಕ್ತದೊತ್ತಡ, ಮಧುಮೇಹ, ಗಂಟುನೋವು, ಮೈಗ್ರೇನ್, ತಲೆನೋವು ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗಲಿದೆ.





















































 
 

ತರಗತಿಗೆ ಸೇರಲು ಇಚ್ಛಿಸುವವರು ಮೊಬೈಲ್ ನಂಬರ್ : 9901033195, 9844938575, 984530826 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top