ನಾಳೆ (ಮಾ. 4) ಪ್ರೇರಣಾದಲ್ಲಿ ಐಎಎಸ್ ಉಚಿತ ಓರಿಯಂಟೇಷನ್ ಕೋರ್ಸ್

ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಬೇಕು ಎನ್ನುವ ಉದ್ದೇಶದಿಂದ ಪುತ್ತೂರಿನ ಪ್ರೇರಣಾ ಸಂಸ್ಥೆಯಲ್ಲಿ ಮಾರ್ಚ್ 4ರಂದು ಸಂಜೆ 4 ಗಂಟೆಗೆ ಐಎಎಸ್ ಉಚಿತ ಓರಿಯಂಟೇಷನ್ ಕೋರ್ಸ್ ಹಮ್ಮಿಕೊಳ್ಳಲಾಗಿದೆ.

ಎನ್.ಸಿ.ಇ.ಆರ್.ಟಿ. ಕ್ಲಾಸ್, ಪ್ರಚಲಿತ ವಿದ್ಯಮಾನಗಳ ತರಗತಿಗಳು, ಆಪ್ಟಿಟ್ಯೂಡ್ ಕ್ಲಾಸ್ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಿದ್ದು, ಇಂಗ್ಲೀಷ್ ಭಾಷೆಯ ಬ್ರಿಡ್ಜ್ ಕೋರ್ಸ್ ಮತ್ತು ಬರವಣಿಗೆಯ ಕೌಶಲ್ಯದ ಬಗ್ಗೆಯೂ ಮಾಹಿತಿ ನೀಡಲಾಗುವುದು.

ಪ್ರಥಮ, ದ್ವಿತೀಯ ಪಿಯುಸಿ, ಪದವಿ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ನೋಂದಣಿ ಮಾಡಿಕೊಂಡು, ಕೋರ್ಸಿನ ಸದುಪಯೋಗ ಪಡೆದುಕೊಳ್ಳಬಹುದು.





















































 
 

2024ರ ಐಎಎಸ್ ಪರೀಕ್ಷೆಯನ್ನು ಗುರಿಯಾಗಿಸಿಕೊಂಡು, ಕೋರ್ಸ್ ಆರಂಭಿಸಲಾಗಿದೆ. ಹಾಗಾಗಿ ಐಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಯಿಸುವ ಗುರಿ ಇಟ್ಟುಕೊಂಡಿರುವವರು ಕೋರ್ಸಿನ ಸದುಪಯೋಗ ಪಡೆದುಕೊಳ್ಳಬಹುದು. ಮಾಹಿತಿಗೆ 8904877721 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top