ಮಂಗಳೂರಿನಲ್ಲಿ ದೇಶದಲ್ಲಿಯೇ ಗರಿಷ್ಠ ತಾಪಮಾನ

ಮಂಗಳೂರು : ಚಳಿಗಾಲ ಮುಗಿದ ಬೆನ್ನಿಗೆ ಕರಾವಳಿಯಲ್ಲಿ ಬಿಸಿಲ ಝಳ ಏರುತ್ತಿದೆ. ಬೆಳಗ್ಗಿನ ಹೊತ್ತು ತುಸು ಚಳಿ ಇದ್ದರೂ ಹೊತ್ತೇರುತ್ತಿರುವಂತೆ ಸೂರ್ಯ ಸುಡಲು ತೊಡಗುತ್ತಾನೆ. ಈ ಸಲ ವಾತಾವರಣದಲ್ಲಿ ಬಹಳ ವ್ಯತ್ಯಾಸ ಕಂಡು ಬರುತ್ತಿದ್ದು ಸೆಕೆ ವಿಪರೀತ ಹೆಚ್ಚಳವಾದ ಅನುಭವವಾಗುತ್ತಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಮಂಗಳೂರಿನಲ್ಲಿ ಗುರುವಾರ 36.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇದು ಮಾರ್ಚ್‌ ತಿಂಗಳಲ್ಲಿ ದೇಶದಲ್ಲಿಯೇ ಅತ್ಯಧಿಕವಾಗಿದ್ದು, ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳವಾಗಿದೆ. ಕನಿಷ್ಠ ತಾಪಮಾನ 23.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ವಾಡಿಕೆಗಿಂತ 1 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿದೆ.

2017ರಲ್ಲಿ 37.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು ಮಾರ್ಚ್‌ ತಿಂಗಳ ಈ ವರೆಗಿನ ದಾಖಲೆಯಾಗಿದೆ. ಉಭಯ ಜಿಲ್ಲೆಗಳಲ್ಲಿ ದಿನವಿಡೀ ಸೆಕೆ ಮತ್ತು ಉರಿಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಬೆಳಗ್ಗೆ ಮೋಡ ಕವಿದ ವಾತಾವರಣವಿತ್ತು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top