ನಾಳೆ (ಮಾ.4) : ನರಿಮೊಗರು ಪೊಸಮೆನ್ಪದವು ಮುಗೇರಡ್ಕ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ನೇಮೋತ್ಸವ

ಪುತ್ತೂರು : ತಾಲೂಕಿನ ನರಿಮೊಗರು ಗ್ರಾಮದ ಪೊಸಮೆನ್ಪದವು ಮುಗೇರಡ್ಕ ಶ್ರೀ ಕಲ್ಕುಡ – ಕಲ್ಲುರ್ಟಿ ಹಾಗೂ ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ ಮಾ.4 ಶನಿವಾರ ರಾತ್ರಿ ನಡೆಯಲಿದೆ.

ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 7ಕ್ಕೆ ಗಣಹೋಮ, 8 ಕ್ಕೆ ನಾಗತಂಬಿಲ, ಪರಿವಾರ ದೈವಗಳಿಂದ ತಂಬಿಲ, 10.30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 11.30 ಕ್ಕೆ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಜರಗಲಿದೆ.

ಸಂಜೆ 5.30 ಕ್ಕೆ ದೈವಗಳ ಭಂಡಾರ ತೆಗೆಯುವುದು, 6.30 ಕ್ಕೆ ಕಲ್ಕುಡ ದೈವಗಳ ನೇಮೋತ್ಸವ, ರಾತ್ರಿ 9.30 ಪ್ರಸಾದ ವಿತರಣೆ, ಅನ್ನಸಂತರ್ಪಣೆ ಬಳಿಕ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ಹಾಸ್ಯಮಯ ನಾಟಕ ಜರಗಲಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top